

ಕಳಸ: ರಾಜ್ಯಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಕಳಸ ತಾಲೂಕು ವತಿಯಿಂದ ಕಳಸದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕಳಸ ಮುಖ್ಯ ರಸ್ತೆಯಲ್ಲಿ ಸಾಗಿ ಕಾಂಗ್ರೆಸ್ ವಿರುದ್ಧ ಘೋಷನೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕಳಸ ಪೊಲೀಸ್ ಠಾಣೆ ಸಮೀಪ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಅದನ್ನು ಸರಿದೂಗಿಸಲು ನಿತ್ಯ ದಿನ ಬಳಕೆ ವಸ್ತುಗಳಿಗೆ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಬಿಜೆಪಿ ಕಳಸ ಅಧ್ಯಕ್ಷ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಹೇಶ್, ಸುಂದರ ಶೆಟ್ಟಿ, ಮುಖಂಡರಾದ ಎಂ.ಎ.ಶೇಷಗಿರಿ, ರಂಗನಾಥ್, ನಾಗಭೂಷಣ್, ಮೋಹನ್, ಸುಜಯ ಸದಾನಂದ, ಉಷಾ ವಿಶ್ವನಾಥ್, ಸುನೀಲ್, ಪ್ರಸಿದ್ದ ಜೈನ್, ರವಿಕುಮಾರ್ ಇತರರು ಇದ್ದರು.