ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ

27 LXR 1
Published on

ಲಕ್ಷ್ಮೇಶ್ವರ: ಹದಿನೆಂಟು ಶಾಸಕರ ಅಮಾನತು ಮಾಡಿದ ಸ್ವೀಕರ್ ನಿರ್ಣಯ ಹಾಗೂ ಸಂವಿಧಾನ ಬಾಹಿರವಾಗಿ ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ ಶಿಗ್ಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಹಾಗೂ ತುಷ್ಟೀಕರಣದ ರಾಜಕಾರಣ, ಎಸ್‌ಸಿ ಮತ್ತು ಎಸ್‌ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದರ ವಿರುದ್ಧ ಮತ್ತು ಹನಿಟ್ರ್ಯಾಪ್ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಹೋರಾಟ ಮಾಡಿದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆ ಖಂಡನೀಯ. ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಜನವಿರೋಧಿ ಯೋಜನೆಗಳಿಗೆ ಬಿಜೆಪಿಯವರು ಅಡ್ಡಿಯಾಗುತ್ತಾರೆ ಎಂದು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ಡಿ.ವೈ. ಹನಗುಂದ, ಗಂಗಾಧರ ಮೆಣಸಿನಕಾಯಿ, ಎಫ್.ಕೆ. ಕಾಳಪ್ಪನವರ, ಸೋಮಣ್ಣ ಡಾಣಗಲ್, ಎಚ್.ಎಫ್. ತಳವಾರ, ನೀಲಪ್ಪ ಹತ್ತಿ, ಅನೀಲ ಮುಳುಗುಂದ, ಸಂಜೀವ ದೇಸಾಯಿ, ಕೃಷ್ಣ ಬಿದರಳ್ಳಿ, ಈರಣ್ಣ ಅಕ್ಕೂರ, ಶಿವಾನಂದ ಮುದಗಲ್, ಶಂಭು ಹುನಗುಂದ, ಹುಚ್ಚಪ್ಪ ಹೂಗಾರ, ನಟರಾಜ್ ಪವಾಡದ, ಪರಶುರಾಮ ತಳವಾರ, ಮುತ್ತಣ್ಣ ತೋಟದ, ಮನೋಜ್ ರಗಟಿ, ಮಹಾಂತೇಶ ತಳವಾರ, ಎಸ್.ವಿ. ಹರ್ತಿ, ವಿಶಾಲ ಬಟಗುರ್ಕಿ, ಬಸವರಾಜ ಬೆಳಗಟ್ಟಿ, ಬಸವರಾಜ ಕರ್ಜಗಿ, ಸೋಮು ಬಸರಿ, ಗೂಡಿಸಾಬ್ ಅನ್ವರ, ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net