

ಹುಬ್ಬಳ್ಳಿ : ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಬಿಜೆಪಿ ಪೂರ್ವ ವಿಧಾನಸಭೆ ಕ್ಷೇತ್ರದ ವತಿಯಿಂದ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಎದುರಿನ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ದರ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಕೃತಿ ಹಿಡಿದು ಪ್ರತಿಭಟಿಸಿ, ನಂತರ ದಹಿಸಿದರು.
ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಶಿವು ಮೆಣಸಿನಕಾಯಿ, ದತ್ತ್ತುೂರ್ತಿ ಕುಲಕರ್ಣಿ, ಮುಖಂಡರಾದ ಸತೀಶ ಶೇಜವಾಡಕರ, ರಂಗಾ ಬದ್ದಿ, ಜಗದೀಶ ಬುಳ್ಳಾನವರ, ರಾಜು ಜರತಾರಾಘರ, ಪಾಲಿಕೆ ಸದಸ್ಯ ರಾಧಾಬಾಯಿ ಸಫಾರೆ, ಪ್ರೀತಿ ಲದವಾ, ಚಂದ್ರಶೇಖರ ಗೋಕಾಕ, ಲಕ್ಷ್ಮೀಕಾಂತ ಘೋಡಕೆ, ವೆಂಕಟೇಶ ಅಶೋಕ ಕಾಟವೆ , ನಾಗರಾಜ ಟಗರಗುಂಟಿ, ಗೋಪಾಲ ಕಲ್ಲೂರ, ಮಿತುನ್ ಚವ್ಹಾಣ, ರಾಜು ಕೊರ್ಯುಣಮಠ, ಸುಬಾಸ ಅಥಣಿ, ಅಮೃತ ಹಿರೇಮಠ, ಅನೂಪ ಬಿಜವಾಡ, ಅಣ್ಣಪ್ಪ ಗೋಕಾಕ, ಸುವರ್ಣ ಜಂಗಮಗೌಡರ, ಪ್ರತಿಭಾ ಪವಾರ, ಅನುರಾಧ ಚಿಲ್ಲಾಳ, ಪದ್ಮಾವತಿ ಚುಗಂಪಲ್ಲಿ, ದೀಪಕ ಮೆಹರವಾಡೆ, ಸವಿತಾ ಚವ್ಹಾಣ, ನಿಲಕಂಠ ತಡಸದ ಮಠ, ಮಂಜುನಾಥ ಕಲಾಲ, ಪ್ರಿನ್ಸ್ ಶಮಾ, ಮಾರುತಿ ಚಾಕಲಾಬ್ಬಿ, ಮಲ್ಲಪ್ಪ ಶಿರಕೋಳ, ವೆಂಕಟೇಶ ವಿನಾಯಕ ಲದವಾ. ಮಿಥುನ ಚವ್ಹಾಣ, ನರಸಯ್ಯ ಬಿಜವಾಡ, ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.