ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

bjp protest againist power rate hike
Published on

ಅಳ್ನಾವರ: ವಿದ್ಯುತ್ ಹಾಗೂ ಇತರೆ ವಸ್ತುಗಳ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವು ಜನ ವಿರೋಧಿ ಆಡಳಿತ ಕೈಗೊಂಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ವಿನಾಕಾರಣ ಕಾಲಹರಣ ಮಾಡುತ್ತಿದೆ. ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ವಿದ್ಯುತ್, ಬಸ್ ದರ ಹಾಗೂ ದಿನಸಿ ವಸ್ತುಗಳನ್ನು ಬೇಕಾ ಬಿಟ್ಟಿಯಾಗಿ ಬೆಲೆ ಏರಿಕೆ ಮಾಡಿದೆ. ಮಳೆ ಇಲ್ಲದೆ ಬಿತ್ತನೆಗೆ ವಿಳಂಬವಾಗಿದೆ ಕೆಲ ಪ್ರದೇಶಗಳಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಿವಾಜಿ ಡೊಳ್ಳಿನ, ಯಲ್ಲಾರಿ ಹುಬ್ಳಿಕರ, ನಾರಾಯಣ ಮೋರೆ, ನಾಗರಾಜ ಬುಡರಕಟ್ಟಿ, ಅರ್ಜುನ ಬೆನ್ನಳಕರ, ಅನಂತ ರವಳಪ್ಪನವರ, ಲಖನ ಬರಗುಂಡಿ, ಮಹಾಂತೇಶ ಮದ್ನಳ್ಳಿ, ಪ್ರತಾಪ ಕಲಾಲ, ಕಾಶಿನಾಥ ಕೌಜಲಗಿ, ಪ್ರಕಾಶ ಗಾಣಿಗೇರ, ಲಿಂಗರಾಜ ಮೂಲಿಮನಿ, ಮಂಜುಳಾ ಹಿರೇಮಠ, ಸುವರ್ಣ ಬೇಕ್ವಾಡಕರ, ಚನ್ನಬಸಪ್ಪ ಕುಬಸದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net