ಗುತ್ತಿಗೆದಾರನ ಕಿರುಕುಳದ ವಿರುದ್ಧ ಬಿಜೆಪಿ ಪ್ರತಿಭಟನೆ

New bjp strike
Published on

ಹುಬ್ಬಳ್ಳಿ : ನಗರದ ದುರ್ಗದಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಮಹಾನಗರ ಪಾಲಿಕೆಯಿಂದ ಟೆಂಡರ್ ಪಡೆದ ವೆಂಕಟ ಎಂಬಾತ ಬಿದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದುರ್ಗದಬೈಲ್​ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ತಳಿರು, ತೋರಣ, ಹೂವು, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಸ್ಥರಿಂದ ತಾಸಿಗೆ 100 ರೂ. ಪಡೆದಿದ್ದಾನೆ. ಪಾಲಿಕೆ ಅಧಿಕಾರಿಗಳಿಗೂ ಮನಬಂದಂತೆ ಬೈದಿದ್ದಾನೆ ಎಂದು ಆರೋಪಿಸಿದರು.

ವ್ಯಾಪಾರಸ್ಥರು ಹಾಗೂ ಸಾರ್ವಜನಿಕರೊಂದಿಗೆ ಗುಂಡಾ ವರ್ತನೆ ತೋರುತ್ತಿರುವ ವ್ಯಕ್ತಿಯ ಟೆಂಡರ್ ಅನ್ನು ತಕ್ಷಣ ರದ್ದುಗೊಳಿಸುವಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜು ಚುಘ, ಪಿಯುಷ ಮಹಾಜನ್, ಸಂಗಮ ಹಂಜಿ, ಕಾರ್ತಿಕ ಬಾಕಳೆ, ರಾಜು ಕೋರ್ಯುಣಮಠ, ಮಕ್ಸೂದ ಸವಣೂರ, ಮೆಹಬೂಬ ಜಕಾತಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net