ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

Published on

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಸದನ ನಡೆಯುವ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿಗರು ಸಿಟಿ ರವಿಯ ವಿರುದ್ಧ ಹಲ್ಲೆ ಮಾಡಲು ಬಂದಿವುದು ಕಾಂಗ್ರೆಸ್ ಸರ್ಕಾರ ಲೋಪವನ್ನ ತೋರಿಸುತ್ತಿದೆ. ಈ ರೀತಿಯ ಗುಂಡಾ ವರ್ತನೆ ಖಂಡನೀಯ. ಸುವರ್ಣಸೌದ ಒಳಗೆ ಈ ರೀತಿ ಹಲ್ಲೆಗೆ ಮುಂದಾಗಿರೋದು ಚರಿತ್ರೆಯಲ್ಲಿ ಮೊದಲು. ಗೂಂಡ ರೀತಿಯಲ್ಲಿ ವರ್ತಿಸಿ ಹಲ್ಲೆಮಾಡಲು ಮುಂದಾವರನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿ.ಟಿ.ರವಿ ಒಬ್ಬ ಎಂ.ಎಲ್.ಸಿ ಇದ್ದಾರೆ. ಅವರನ್ನ ಬಂಧಿಸಿ ಊರೂರು ಸುತ್ತಿಸಿರೋದು ಅಪರಾದ. ಬಂಧಿಸಿದರೆ ನೇರವಾಗಿ ಜನ ಪ್ರತಿನಿಧಿಗಳ ನ್ಯಾಯಲಯಕ್ಕೆ ಹಾಜರುಪಡಿಸಬೇಕು. ಅದನ್ನ ಪೊಲೀಸರು ಮಾಡಿಲ್ಲ. ಲಕ್ಷಿ ಹೆಬ್ಬಾಳ್ಕರ್ ಸಿಟಿ ರವಿಯವರಿಗೆ ಕೊಲೆಗಡುಕರು ಎಂದಿರೋದು ತಪ್ಪೆ. ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾಂಗೆ ಪೊಲೀಸ್ ಅಧಿಕಾರಿ ಬಂದ ಸಮಯದಲ್ಲಿ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಅವರೊಂದಿಗೂ ದಾದಾ ಗೀರಿ ಮಾಡಿರುವುದು ಸರಿಯಿಲ್ಲ ಎಂದರು.

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಾಂಗ್ರೆಸ್‌ನವರು ಕಾನೂನನ್ನು ಗಾಳಿಗೆ ತೂರಿ ಗೂಂಡಾ ವರ್ತನೆ ತೋರಿದ್ದಾರೆ. ಸುವರ್ಣಸೌಧದಲ್ಲೇ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ದೇಶದ್ರೋಹಿಯನ್ನು ವಶಕ್ಕೆ ಪಡೆಯವ ರೀತಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದು ಖಂಡನಾರ್ಹ ಎಂದರು.

ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಕಾನೂನು ಬಾಹಿರ ಬಂಧನ ಎಂದು ಕಿಡಿ ಕಾರಿದ ಬೋಪಯ್ಯ, ತಕ್ಷಣ ಸಿಟಿ ರವಿ ಅವರನ್ನು ಬಿಡುಗಡೆ ಮಾಡಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದೆ ಅವರೂ ಅನುಭವಿಸುತ್ತಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರ.ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಲೋಕೇಶ್, ವಕ್ತಾರ ಅರುಣ್ ಕುಮಾರ್, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಹಿರಿಯ ಮುಖಂಡ ಎಂ.ಬಿ.ದೇವಯ್ಯ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net