ಧರ್ಮಾಚರಣೆಯಿಂದ ವಿಮುಖರಾಗಿಸುವ ಷಡ್ಯಂತ್ರ: ವಿದ್ವಾನ್​ ಸಗ್ರಿ ಆನಂದತೀರ್ಥ

udp-24-bjp
Published on

ಉಡುಪಿ: ಸಾಮಾಜಿಕ ಅವಮಾನಕ್ಕೆ ಹೆದರಿ ಮುಂದಿನ ಜನಾಂಗ ಧರ್ಮಾಚರಣೆಯಿಂದ ವಿಮುಖರಾಗಲಿ ಎಂಬ ದುರುದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಪರೀಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತುಂಡರಿಸುವ ಹೀನಕೃತ್ಯಕ್ಕೆ ಕೈಹಾಕಿವೆ ಎಂದು ವಿದ್ವಾನ್​ ಸಗ್ರಿ ಆನಂದತೀರ್ಥ ಆಚಾರ್ಯ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಉಡುಪಿ ನಗರ ಟಕ ವತಿಯಿಂದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಯಜ್ಞೋಪವಿತ ( ಜನಿವಾರ) ಕತ್ತರಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ಧೋರಣೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಬ್ರಹ್ಮಬಲ ಅಡಗಿಸುವ ಕೆಲಸ ನಡೆಯುತ್ತಿದೆ. ಯುವ ಜನಾಂಗ ಹಿಂದೂ ಸಂಸತಿ, ಧರ್ಮ ಮರೆತರೆ ದೇಶ ಅಶಾಂತಿಯ ನೆಲೆಯಾಗಲಿದೆ. ಧಮಾರ್ಚರಣೆಗೆ ಧಕ್ಕೆ ಬಂದಾಗ ಒಟ್ಟಾಗಿ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.

ವಿದ್ವಾಂಸ ಹರಿಪ್ರಸಾದ್​ ಭಟ್​ ಹೆರ್ಗ ಮಾತನಾಡಿ, ಇದು ಜನಿವಾರ ಕತ್ತರಿಸಿದಲ್ಲ, ಭದ್ರವಾದ ಹಿಂದು ಸಮಾಜದ ಬೇರನ್ನು ಕತ್ತರಿಸುವ ಪ್ರಯತ್ನವಾಗಿದೆ. ಕಳೆದ 70 ವರ್ಷಗಳಿಂದ ಹಿಂದು ಸಮಾಜವನ್ನು ಬೇರೆ ಬೇರೆ ರೀತಿಯಲ್ಲಿ ಒಡೆದಾಳುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇಷ್ಟು ಕೀಳುಮಟ್ಟಕ್ಕೆ ಯಾವ ಸರ್ಕಾರಗಳೂ ಇಳಿದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ವಾನ್​ ಚೆಂಪಿ ರಾಮಚಂದ್ರ ಭಟ್​, ಬ್ರಾಹ್ಮಣ ಸಂದ ಶ್ರೀಕಾಂತ್​ ಉಪಾಧ್ಯಾಯ, ಸಂದೀಪ ಮಂಜ, ಮುಖಂಡರಾದ ಡಾ.ಶಿವಾನಂದ್​ ನಾಯಕ್​, ಬಾಲಾಜಿ ರಾಘವೇಂದ್ರ ಆಚಾರ್ಯ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್​ ಕುಮಾರ್​ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ನಗರಸಭೆ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ಬಿಜೆಪಿ ನಗರ ಅಧ್ಯಕ್ಷ ದಿನೇಶ್​ ಆಮೀನ್​, ವೀಣಾ ಶೆಟ್ಟಿ, ವಾಸುದೇವ ಭಟ್​ ಪೆರಂಪಳ್ಳಿ, ಮುರಳಿ ಕಡೆಕಾರ್​ , ಕೃಷ್ಣರಾವ್​ ಕೊಡಂಚ ಮೊದಲಾದವರು ಉಪಸ್ಥಿತರಿದ್ದರು. ಯುವಮೋರ್ಚಾ ಜಿ.ಪ್ರ.ಕಾರ್ಯದರ್ಶಿ ಶಶಾಂಕ್​ ಶಿವತ್ತಾಯ, ಜಗದೀಶ್​ ಆಚಾರ್ಯ ಕಪ್ಪೆಟ್ಟು ನಿರೂಪಿಸಿದರು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿಯನ್ನು ಸ್ವೀಕರಿಸಿದರು.

ರಾಜ್ಯ ಸರ್ಕಾರ ಹಿಂದೂ ಸಮಾಜದ ಮೇಲೆ ದಾಳಿ ಮಾಡಬೇಕೆಂಬ ಉದ್ದೇಶದಿಂದಲೇ ಸಿಇಟಿ ವಿದ್ಯಾರ್ಥಿಗಳ ಜನಿವಾರವನ್ನು ಕಿತ್ತುಕೊಂಡಿದೆ. ಈ ದಬ್ಬಾಳಿಕೆಯನ್ನು ನಿಲ್ಲಿಸದಿದ್ದರೇ, ತಕ್ಕ ಉತ್ತರ ನೀಡಲು ಉಡುಪಿಯ ಜನತೆ ಸಿದ್ದರಿದ್ದಾರೆ. ಯಶ್ಪಾಲ್​ ಸುವರ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net