

ಉಡುಪಿ: ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿದರೂ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಒತ್ತಡ ಹೇರಿ ಕಾರ್ಯಕ್ರಮ ಆಯೋಜಿಸಿರುವುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರದ ತಪು$್ಪ ನಿರ್ಧಾರದಿಂದ 11 ಮಂದಿ ಮೃತರಾಗಿದ್ದಾರೆ. ಕಾಂಗ್ರೆಸ್ ಪ್ರಚಾರದ ತೆವಲಿಗೆ ಹೆಣಗಳ ಮೇಲೆ ವಿಜಯೋತ್ಸವ ಆಚರಿಸಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರ ಪೋಲಿಸ್ ಅಧಿಕಾರಿಗಳ ಅಮಾನತು ಮಾಡಿರುವ ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕ್ರೀಡಾಂಗಣ ಬಳಿ ಲಾಂತರ ಜನ ಸೇರಿದ್ದರೂ ಆ್ಯಂಬುಲೆನ್ಸ್ ಅಥವಾ ಅಗ್ನಿಶಾಮಕ ದಳ ವ್ಯವಸ್ಥೆ ಕಲ್ಪಿಸಿಲ್ಲ. ಮಾನ ಮರ್ಯಾದೆ ನತೆ ಇದ್ದರೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಆರ್ ಸಿ ಬಿ ತಂಡಕ್ಕೆ ನೈತಿಕತೆ ಇದ್ದರೆ ಗೆದ್ದ 20 ಕೋಟಿ ರೂ. ಮೊತ್ತವನ್ನು ಮೃತ ಹಾಗೂ ಗಾಯಾಳುಗಳಿಗೆ ನೀಡಬೇಕು. ಈ ಕ್ರಿಕೇಟ್ ತಂಡಗಳು ದೇಶಕ್ಕಾಗಿ ಅಥವಾ ರಾಜ್ಯಕ್ಕಾಗಿ ಆಟ ಆಡಿದವರಲ್ಲ ಎಂಬುದನ್ನು ಮನಗಾಣಬೇಕು. ಯುವಜನರಲ್ಲಿ ಅಂಧಾಭಿಮಾನ ಒಳ್ಳೆಯದ್ದಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿದರು. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಮುಖಂಡರಾದ ರಾವೇಂದ್ರ ಕಿಣಿ, ಸಂಧ್ಯಾ ರಮೇಶ್, ರೇಶ್ಮಾ ಉದಯ್ ಶೆಟ್ಟಿ, ಪೃಥ್ವಿರಾಜ್ ಬಿಲ್ಲಾಡಿ, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ಗಿರೀಶ್ ಅಂಚನ್, ಶ್ರೀಶನಾಯಕ್ ಪೆರ್ಣಂಕಿಲ ಮೊದಲಾದವರಿದ್ದರು. ಹೆರ್ಗ ದಿನೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.