

ಹುಬ್ಬಳ್ಳಿ: ರಾಜ್ಯ ಸರ್ಕಾರ ಇಂಧನ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಹುಬ್ಬಳ್ಳಿಯ ಗೋಕುಲ ರೋಡ್ ಅಕ್ಷಯ ಪಾರ್ಕ್ ಪೆಟ್ರೋಲ್ ಬಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಚೌಹಾನ್, ದತ್ತಮೂರ್ತಿ ಕುಲಕರ್ಣಿ, ಬೀರಪ್ಪ ಖಂಡೇಕರ, ಈಶ್ವರಗೌಡ ಪಾಟೀಲ, ಕೃಷ್ಣ ಗಂಡಗಾಳೇಕರ, ಪ್ರಕಾಶ ಕ್ಯಾರಕಟ್ಟಿ, ರೂಪಾ ಶೆಟ್ಟಿ, ವೆಂಕಟೇಶ ಕಾಟವೆ, ಹರೀಶ ಜಂಗಲಿ, ಮುಕುಂದಗೌಡ ಗುಗ್ರಿ, ಶಿವನಗೌಡ, ದೀಪಕ್ ಜಿತೂರಿ, ಚಂದ್ರು ನೂಲ್ವಿ, ಅಕ್ಕಮ್ಮ ಹೆಗಡೆ, ಸಂಗೀತ ಬದ್ದಿ, ಗೀತಾ ಮುದ್ದಿ, ಕಾರ್ಯಕರ್ತರು ಹಾಗೂ ಮಹಿಳಾ ಮೋರ್ಚಾ ಸದಸ್ಯರು ಪಾಲ್ಗೊಂಡಿದ್ದರು.