

ಧಾರವಾಡ: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಇತ್ತೀಚೆಗೆ ಮಹಿಳೆಯನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು.
ಈ ಘಟನೆ ಮಹಾಭಾರತದ ದುಶ್ಯಾಸನನಿಂದಾದ ವಸ್ತçಹರಣ ನೆನಪಿಗೆ ಬರುತ್ತದೆ. ಇಂಥ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ದೀನ- ದಲಿತ ಮಹಿಳೆಯರ ಸಹಾಯಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಽಕಾರ ಮುಖ್ಯ ಹೊರರು ಜನರ ಮಾನ, ಮಯÁðದೆ ಹಾಗೂ ಸುರಕ್ಷತೆ ಮುಖ್ಯವಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಸಂಜಯ ಕಪಟಕರ, ಶಿವು ಹೀರೆಮಠ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಮೋಹನ ರಾಮದುರ್ಗ, ಮಂಜುನಾಥ ಹೊಸೂರ, ರಾಕೇಶ ನಾಝರೆ, ಮಹಾಂತೇಶ ಲಿಂಬಣ್ಣದವರಮಠ, ವಿಷ್ಣು ಕೊರ್ಲಳ್ಳಿ, ರಾಜೇಶ್ವರಿ ಸಾಲಗಟ್ಟಿ, ರಾಜೇಶ್ವರಿ ಅಳಗವಾಡಿ, ನಿರ್ಮಲಾ ಜವಳಿ, ಪುಷ್ಪಾ ಮಜ್ಜಗಿ, ಪುಷ್ಪಾ ನವಲಗುಂದ, ಚಂದ್ರಕಲಾ ಕೊಟಬಾಗಿ, ಜ್ಯೋತಿ ಪಾಟೀಲ, ಇತರರಿದ್ದರು.