

ಧಾರವಾಡ: ರಾಜ್ಯ ಸರ್ಕಾರ ರೈತ ವಿರೋಽ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಬಿಜೆಪಿ ಘಟಕದಿಂದ ಜಿಲ್ಲಾಽಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾ¬ತು. ಮÁಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಕಲಾಭವನ ಮೈದಾನದಿಂದ ಜಿಲ್ಲಾಽಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಧಾರವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಎಕರೆಗೆ ೨೦,೦೦೦ ರೂ. ಪರಿಹಾ ನೀಡಬೇಕು. ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸಿ, ವಿದ್ಯುತ್ ದರವನ್ನು ಕಡಿಮೆಗೊಳಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯನ್ನು ಪುನರಾರಂಭಿಸಿ, ರೈತರ ಖಾತೆಗಳಿಗೆ ವಾರ್ಷಿಕ ೪,೦೦೦ ರೂ. ಜಮಾ ಮಾಡಬೇಕು. ರೈತ ವಿದ್ಯಾನಿಽ ಯೋಜನೆಯನ್ನು ಪುನರಾರಂಭಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು. ಸರ್ಕಾರದ ಯುವನಿಽ ಯೋಜನೆಯನ್ನು ೫ ವರ್ಷಗಳ ಹಿಂದಿನ ನಿರುದ್ಯೋಗಿಗಳಿಗೂ ಅನ್ವಯವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಸವರಾಜ ಕುಂದಗೋಳಮಠ, ನಿಜನಗೌಡ ಪಾಟೀಲ, ಈರೇಶ ಅಂಚಟಗೇರಿ, ಶಶಿಮೌಳಿ ಕುಲಕರ್ಣಿ, ಟಿ.ಎಸ್. ಪಾಟೀಲ, ಸಂಜಯ ಕಪಟಕರ, ಶಂಕರ ಕೋಮಾರದೇಸಾಯಿ, ಈರಣ್ಣ ಹಪ್ಪಳಿ, ಸಂಗನಗೌಡ ರಾಮನಗೌಡರ, ಸುಶೀಲಾ ಪಾಟೀಲ, ಇತರರಿದ್ದರು.