ಕಾಂಗ್ರೆಸ್​ ವಿರುದ್ಧ ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ

22GDG02
ಗದಗ ಗಾಂಧಿವೃತ್ತದಲ್ಲಿ ಕಾಂಗ್ರೆಸ್​ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಮುತ್ತಣ್ಣ ಲಿಂಗನಗೌಡರ, ಎಸ್​.ವಿ. ಸಂಕನೂರು, ರಾಜು ಕುರಡಗಿ ಉಷಾ ದಾಸ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್​ ಪಕ್ಷದ ವಿರುದ್ಧ ಮತ್ತು ಸಭಾಧ್ಯಕ್ಷರಾಗಿಯೂ ಪ್ರತಿಪಕ್ಷಗಳ ಸಭೆಗೆ ನಾಯಕರನ್ನು ಕರೆತರಲೂ ಹೋದ ಯು.ಟಿ. ಖಾದರ್​ ನಡೆ ವಿರುದ್ಧ ಜಿಲ್ಲೆಯಾದ್ಯಂತ ಬಿಜೆಪಿ ಮುಕಂಡರು ಪ್ರತಿಭಟನೆ ನಡೆಸಿದರು. ವಿವಿಧ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದರು. ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ನಗರದ ಗಾಂಧಿವೃತ್ತದ ಬಳಿ ಬಿಜೆಪಿ ಜಿಲ್ಲಾ ಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯ ಮುತ್ತಣ್ಣ ಲಿಂಗನಗೌಡ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ರಾಜ್ಯವು ಬಯೋತ್ಪಾದನೆ ಭಯದಲ್ಲಿ ನಲುಗುತ್ತಿದೆ. ರೈತರ ಆತ್ಮಹತ್ಯೆ, ಜೈನಮುನಿಗಳ ಹತ್ಯೆ, ಭಯೋತ್ಪಾದಕರ ಅಟ್ಟಹಾಸ ನಡೆಯುತ್ತಿವೆ. ಶಂಕಿತ ಆರೋಪಿಗಳ ಮನೆಗಳಲ್ಲಿ ಗ್ರೆನೇಡ್​, ಪಿಸ್ತೂಲ್​ ಇತ್ಯಾದಿಗಳು ಸಿಕ್ಕಿದ್ದರೂ ಕಾಂಗ್ರೆಸ್​ ಮುಖಂಡರು ಮೌನವಾಗಿದ್ದಾರೆ. ಇದು ದುರಾಡಳಿತ ಮತ್ತು ಅಹಂಕಾರ ಎಂದು ಆರೋಪಿಸಿದರು.
ಎಸ್​.ವಿ. ಸಂಕನೂರು ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ಚರ್ಚೆಗಳಿಲ್ಲದೆ ಸದನದ ಕಲಾಪ ನಡೆಯುವುದು ಅಸಾಧ್ಯ, ಚರ್ಚೆಗೆ ಅವಕಾಶವೇ ನೀಡದೆ ಏಕಪಯವಾಗಿ ಕಾಂಗ್ರೆಸ್​ ವತಿರ್ಸುತ್ತಿದೆ. ಸ್ಪೀಕರ್​ ಯು.ಟಿ.ಖಾದರ್​ ಅವರು ವಿಪಗಳಾದ ಬಿಜೆಪಿ ಮತ್ತು ಜೆಡಿಎಸ್​ ಗಳಿಗೆ ಚಚಿರ್ಸಲು ಅವಕಾಶವನ್ನೇ ನೀಡದೆ 10 ಜನ ಬಿಜೆಪಿ ಶಾಸಕರನ್ನು ಸಸ್ಪೆಂಡ್​ ಮಾಡಿದ್ದಾರೆ. ರೈತ ವಿದ್ಯಾಥಿರ್ಗಳಿಗೆ, ನೇಕಾರರಿಗೆ, ಆಟೋ, ಟ್ಯಾಕ್ಸಿ, ಕ್ಯಾಬ್​, ಡೆವರ್​ಗಳು, ಮೀನುಗಾರರ ಮಕ್ಕಳಿಗೆ ನೀಡುತ್ತಿರುವ ವಿದ್ಯಾಥಿರ್ವೇತನವನ್ನು ಕಾಂಗ್ರೆಸ್​ ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು
ಬಿಜೆಪಿ ಮುಖಂಡ ರಾಜು ಕುರಡಗಿ ಮಾತನಾಡಿ, ಕಾಂಗ್ರೆಸ್​ ಮತ್ತು ಇತರೆ 24 ಪಗಳ ನಾಯಕರನ್ನು ಕರೆತರಲು, ಊಟ ಉಪಚಾರಗಳನ್ನು ಒದಗಿಸಲು 30 ಕ್ಕೂ ಹೆಚ್ಚು ಐಎಎಸ್​ ಅಧಿಕಾರಿಗಳನ್ನು ಕಾಂಗ್ರೆಸ್​ ಪಕ್ಷ ಬಳಸಿದೆ. ಸದನದಲ್ಲಿ ಬಜೆಟ್​ ಚರ್ಚೆಗೆ ಅವಕಾಶ ನೀಡದೆ ಇದ್ದಾಗ, ಪ್ರತಿಭಟಿಸಿದಾಗ ಕಾಗದ ಪತ್ರಗಳನ್ನು ಹರಿದ ಕುಂಟನೆಪ ನೀಡಿ 10 ಜನ ಶಾಸಕರನ್ನು ಸಸ್ಪೆಂಡ್​ ಮಾಡಿರುವ ಸರ್ವಾಧಿಕಾರಿ ಧೋರಣೆಯ ಅಹಂಕಾರ, ದರ್ಪ, ದೌರ್ಜನ್ಯದ ಪ್ರತಿಮೂತಿರ್ಯಾಗಿರುವ ಕಾಂಗ್ರೆಸ್​ ಸರ್ಕಾರದ ನಡೆ ಖಂಡನೀಯ ಎಂದರು.
ಗಾಂಧಿವೃತ್ತವನ್ನು ಕೆಲಕಾಲ ಬಂದ್​ ಮಾಡಿ ಪ್ರತಿಭಟನೆ ನಡೆಸಲಾಯಿತು.
ಎಂ.ಎಸ್​.ಕರೀಗೌಡ್ರ, ಶ್ರೀಪತಿ ಉಡುಪಿ, ರವಿ ದಂಡಿನ, ನಾಗರಾಜ ಕುಲಕಣಿರ್, ನಿಂಗಪ್ಪ ಮಣ್ಣೂರು, ಕಾಂತೀಲಾಲ ಬನ್ಸಾಲಿ, ಸಂಗಮೇಶ ದುಂದೂರ, ಅಶೋಕ ಸಂಕಣ್ಣವರ, ಭೀಮಸಿಂಗ ರಾಠೋಡ್​ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net