ಸಾಮಾಜಿಕ ಜಾಲತಾಣದಲ್ಲಿ ಅವಹೇಳನ - ಅಪರಾಽ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಮನವಿ - ಪಕ್ಷದ ಕಚೇರಿಯಿಂದ ಠಾಣೆಗೆ ಪಾದಯಾತ್ರೆ

PTR_18 MAY_2
Published on


ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ಅವಹೇಳನಕಾರಿಯಾಗಿ ಬರೆದು ಬೆದರಿಕೆ ಹಾಕಿದ್ದನ್ನು ಖಂಡಿಸಿ ಪುತ್ತೂರು ಬಿಜೆಪಿ ಕಚೇÃರಿಯಿಂದ ನಗರ ಠಾಣೆಗೆ ಕಾರ್ಯಕರ್ತರ ಜತೆ ಪಾದಯಾತ್ರೆಯಲ್ಲಿ ಆಗಮಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅಪರಾಽ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.


ಕಂಬಳ ಸಮಿತಿ ಎಂಬ ವಾಟ್ಸ್ಸಾಪ್ ಗ್ರೂಪ್ ಹಾಗೂ ಫೇಸ್‌ಬುಕ್ ನಲ್ಲಿ ಪ್ರಜ್ವಲ್ ರೈ ಪಾತಾಜೆ ಎಂಬುವರಿAದ ತೇಜೋವಧೆ ನಡೆಸಲಾಗಿದೆ. ಗೂಂಡಾ ಒಬ್ಬ ಹೇಳುವ ಮಾತುಗಳು ಸಂದೇಶ ಒಳಗೊಂಡಿದೆ. ಸಾರ್ವಜನಿಕವಾಗಿ ಮಾಜಿ ಶಾಸಕರ ವ್ಯಕ್ತಿತ್ವಕ್ಕೆ ಚುತಿಯಾಗಿದೆ ಮತ್ತು ಕಲ್ಲೆಸೆಯಬೇಕು ಎನ್ನುವ ಮೂಲಕ ಬೆದರಿಕೆ ಒಡ್ಡಿದ್ದಾರೆ ಆರೋಪಿಸಿದರು.


ಠಾಣೆ ಮುಂಭಾಗ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಶಬ್ದಗಳಿಂದ ಬೈದು ಮಾನಹಾನಿ ಮಾಡಿ, ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಮಾನಸಿಕತೆಯನ್ನು ಹೊಂದಿದ್ದವರು ಅಂತಹ ಕೃತ್ಯಕ್ಕೆ ಕೈಹಾಕಿರುವ ಬಗ್ಗೆ ಪೊಲೀಸ್ ಅಽಕಾರಿಗಳಿಗೆ ಮನವಿ ನೀಡಲಾಗಿದೆ. ನೀತಿ ಸಂಹಿತಿ ಇರುವ ಕಾರಣದಿಂದ ಪ್ರತಿಭಟನೆಗೆ ಮುಂದಾಗಿಲ್ಲ.ನೀತಿ ಸಂಹಿತೆ ಮುಗಿದ ಬಳಿಕ ಮುಂದಿನ ತಿರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.


ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್,ಪಿ.ಜಿ. ಜಗನ್ನಿವಾಸ ರಾವ್, ಸಾಜ ರಾಧಾಕೃಷ್ಣ ಆಳ್ವ,ಆರ್. ಸಿ. ನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ರಾಜೇಶ್ ಬನ್ನೂರು, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ ಬಪ್ಪಳಿಗೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ ಪೆರಿಯತ್ತೋಡಿ, ಪ್ರಸನ್ನ ಮಾರ್ತಾ, ಸಹಜ್‌ರೈ ಬಳಜ್ಜ, ಸುರೇಶ್ ಆಳ್ವ, ರಫೀಕ್ ದರ್ಬೆ, ರಾಧಾಕೃಷ್ಣ ಬೋರ್ಕರ್, ಸುಂದರ್ ಪೂಜಾರಿ ಬಡಾವು, ವಿಜಯ ಬಿ.ಎಸ್., ಜಯಶ್ರೀ ಶೆಟ್ಟಿ, ದೀಕ್ಷಾ ಪೈ, ಶಶಿಕಲ ಸಿ. ಎಸ್., ಜ್ಯೋತಿ ನಾಯಕ್, ಚಿತ್ರಾ ರೈ, ಮತ್ತಿತರರು ಉಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net