

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಮಾಜಿ ಮೇಯರ್‌ಗಳಾದ ಈರೇಶ ಅಂಚಟಗೇರಿ, ರಾಮಣ್ಣ ಬಡಿಗೇರ, ಮಾಜಿ ಶಾಸಕಿ ಸೀಮಾ ಮಸೂತಿ, ರಾಜಣ್ಣ ಕೊರವಿ, ಶಿವು ಹಿರೇಮಠ, ಶಂಕರ ಶೆಳಕೆ, ಶಂಕರ, ಕೋಮಾರದೇಸಾಯಿ, ವಿಜಯಾನಂದ ಶೆಟ್ಟಿ, ಸವಿತಾ ಅಮರಶೆಟ್ಟಿ, ಸಂಜಯ ಕಪಟಕರ, ಶಂಕರ ಮುಗದ, ಮೋಹನ ರಾಮದುರ್ಗ, ಬಸವರಾಜ ಬಾಳಗಿ, ಸಿದ್ದು ಕಲ್ಯಾಣಶೆಟ್ಟಿ, ಮಂಜುನಾಥ ನಡಟ್ಟಿ, ಬಸವರಾಜ ಗರಗ, ಪ್ರಮೋದ ಕಾರಕೂನ, ನಿಜನಗೌಡ ಪಾಟೀಲ, ಗುರುನಾಥಗೌಡ ಗೌಡರ, ವಾಣಿಶ್ರೀ ಮೋಟೆಕರ, ಪುಷ್ಪಾ ಮಜ್ಜಗಿ, ರಾಜೇಶ್ವರಿ ಅಳಗವಾಡಿ, ಇತರರು ಪಾಲ್ಗೊಂಡಿದ್ದರು.
ನಗರದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಧರ್ಮಸ್ಥಳ ಜಾಗೃತಸ್ಥಳ, ಪುಣ್ಯ ಕ್ಷೇತ್ರವೆಂದು ಪೂಜಿಸಲ್ಪಡುತ್ತದೆ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ಮಾಡಿ ಕ್ಷೇತ್ರದ ಹೆಸರು ಹಾಳು ಮಾಡಲಾಗುತ್ತಿದೆ. ಕ್ಷೇತ್ರದ ವಿರುದ್ಧ ಷಡ್ಯಂತ್ರ ರಚಿಸಿದವರೆಲ್ಲ ದೈವದ ಎದುರು ನಾಮಾವಶೇಷವಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಸ್ಕ್ ಮ್ಯಾನ್ ಪ್ರತಿಕೃತಿ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿರುವ ಮಾಸ್ಕ್ ಮ್ಯಾನ್ ಹೋಲುವ ವ್ಯಕ್ತಿಗೆ ಅದೇರೀತಿಯ ಪೋಷಾಕು ಧರಿಸಿ ಪ್ರತಿಭಟನೆಗೆ ಕರೆತರಲಾಗಿತ್ತು. ಆತನ ಕೈಗೆ ಹಗ್ಗ ಕಟ್ಟಿ ಕಲಾಭವನ ಮೈದಾನದಿಂದ ಜಿಲ್ಲಾಽಕಾರಿ ಕಚೇರಿವರೆಗೆ ಎಳೆದು ತರಲಾಗಿತ್ತು.