ಬೆಲೆ ಏರಿಕೆ ಪಿಣರಾಯಿ ಸರ್ಕಾರದ ಕೊಡುಗೆ : ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಆರೋಪ: ಗಂಜಿ ತಯಾರಿಸಿ ಬಿಜೆಪಿ ಪ್ರತಿಭಟನೆ

New Project
Published on

ಕಾಸರಗೋಡು: ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಏರಿಕೆ ಕೇರಳದ ಪಿಣರಾಯಿ ವಿಜಯನ್ ಸರ್ಕಾರದ ಕೊಡುಗೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ.

ನಿತ್ಯೋಪಯೋಗಿ ಸಾಮಗ್ರಿ ಬೆಲೆಯೇರಿಕೆ ಖಂಡಿಸಿ ಬಿಜೆಪಿ ವತಿಯಿಂದ ಕಾಸರಗೋಡು ತಾಲೂಕು ಕಚೇರಿ ಎದುರು ಗಂಜಿ ಬೇಯಿಸುವ ಮೂಲಕ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.

ಕೇರಳದ ಇಂದಿನ ದುಃಸ್ಥಿತಿಗೆ ಕೇರಳವನ್ನಾಳುವ ಎಡರಂಗ ಸರ್ಕಾರ ಪೂರ್ಣ ಹೊಣೆಯಾಗಿದ್ದು, ಇದರಿಂದ ನುಣುಚಿಕೊಳ್ಳಲು ಬಿಜೆಪಿ ಎಂದಿಗೂ ಅವಕಾಶ ನೀಡದು. 2016ರಲ್ಲಿ ಅಧಿಕಾರಕ್ಕೆ ಬರುವಾಗ ಕೇರಳದಲ್ಲಿನ್ನು ಬೆಲೆಏರಿಕೆ ಉಂಟಾಗದೆಂದು ತಿಳಿಸಿದ್ದ ಪಿಣರಾಯಿ ವಿಜಯನ್ ಸರ್ಕಾರದ ಆಡಳಿತದಲ್ಲಿ ನಿತ್ಯೋಪಯೋಗಿ ಸಾಮಗ್ರಿ ದರ ಗಗನಕ್ಕೇರಿದೆ. ಕೇರಳದ ಸಾಲವೇ 480 ಕೋಟಿ ರೂ. ದಾಟಿದೆ. ಆರೋಗ್ಯ, ಶೈಕ್ಷಣಿಕ ವಲಯ ಸಂಪೂರ್ಣ ವಿಲವಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಜನಪರ ಯೋಜನೆ ಜಾರಿಗೊಳಿಸಿ ರಾಜ್ಯದ ಜನತೆಯ ಬವಣೆ ನೀಗುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಸವಿತಾ, ವೀಣಾ ಅರುಣ್ ಶೆಟ್ಟಿ, ರಮಣಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net