

ಗದಗ: ಕಾಶ್ಮೀರ ಹತ್ಯಾಕಾಂಡದ ನಂತರ ಪಾಕಿಸ್ತಾನಾದ ಪ್ರಜೆಗಳನ್ನ ದೇಶದಿಂದ ಹೊರಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕೇಂದ್ರ ಸರ್ಕಾರದ ಸೂಚನೆಗಳನ್ನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಸರಿಯಾಗಿ ಪಾಲಿಸದಿರುವದು ದುರದೃsಷ್ಟಕರ ಎಂದು ಗದಗ ಜಿಲ್ಲಾ ಬಿಜೆಪಿ ಖಂಡಿಸಿದೆ.
ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಾ ಭಾರತದಲ್ಲಿ ಅಶಾಂತಿ ಹಾಗು ಅಸ್ತಿರತೆ ಸೃಷ್ಟಿಗೆ ಪಾಕಿಸ್ತಾನ ಯಾವಾಗಲೂ ಪ್ರಯತ್ನಿಸುತ್ತಲೆ ಇರುವದು ಜಗತ್ತಿಗೆ ಗೊತ್ತಿರುವ ವಿಚಾರ ಆದರೂ ನೆರೆ ರಾಷ್ಟçದ ಜೊತೆಗೆ ಒಳ್ಳೆಯ ಬಾಂಧವ್ಯ ಇರಲಿ ಅನ್ನುವ ಕಾರಣಕ್ಕಾಗಿ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರಗಳು ಸಹಯೋಗ ನೀಡುತ್ತಲೆ ಬಂದಿದ್ದವು. ಆದರೂ ತನ್ನ ಕುಟೀಲ ನೀತಿಯನ್ನ ಬಿಡದಿರುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ಕಾಲ ಈಗ ಕೂಡಿಬಂದಿದ್ದು ದೇಶದ ಜನತೆ ಜಾತಿ, ಮತ, ಪಂಥ, ಪಕ್ಷ ಧರ್ಮ ಎನ್ನದೆ ಎಲ್ಲರು ಒಕ್ಕಟ್ಟಿನಿಂದ ನಿಲ್ಲಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. ಈಗಾಗಲೇ ಪಾಕಿಸ್ತಾನದ ಜೊತಗಿನ ಎಲ್ಲಾ ರಾಜತಾಂತ್ರಿಕ ಸಂಬAಧಗಳನ್ನ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಅಕ್ರಮ ವಲಸಿಗರನ್ನ ಕೂಡಲೇ ದೇಶ ಬಿಟ್ಟು ಹೋಗುವಂತೆ ಕಠಿಣ ಕ್ರಮ ಕೈಗೊಂಡಿದ್ದು ಕೇಂದ್ರ ಗ್ರಹ ಸಚಿವಾಲಯವು ಆದೇಶ ಹೊರಡಿಸಿರುತ್ತದೆ, ಕಾರಣ ಮಾನ್ಯ ಗದಗ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಅಕ್ರಮ ಪಾಕಿಸ್ತಾನಿ ಪ್ರಜೆಗಳನ್ನ ಗುರುತಿಸಿ ದೇಶಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಎಂ.ಎಸ್.ಕರೀಗೌಡ್ರ, ಶ್ರೀಪತಿ ಉಡುಪಿ, ಬಿ.ಎಸ್.ಚಿಂಚಲಿ, ಪ್ರಮುಖರಾದ ಅನೀಲ ಅಬ್ಬಿಗೇರಿ, ಭದ್ರೇಶ ಕುಸ್ಲಾಪೂರ, ಸಿದ್ದು ಪಲ್ಲೇದ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಸಂಕಣ್ಣವರ, ಸುಧೀರ ಕಾಟಿಗರ, ಶಶಿಧರ ದಿಂಡೂರ, ಭಿಮಸಿಂಗ ರಾಠೋಡ, ವಾಯ್.ಪಿ.ಅಡ್ನೂರ, ಶಂಕರ ಕರಿಬಿಷ್ಠಿ, ಮಂಜುನಾಥ ತಳವಾರ, ಮೇಘರಾಜ ನಾಯಕ, ಅಪ್ಪು ಕೊಟಗಿ, ಬಸವರಾಜ ಹಡಪದ, ಶಂಕರ ಮಲ್ಲಸಮುದ್ರ, ಪಂಚಾಕ್ಷರಿ ಅಂಗಡಿ, ಡಿ.ಬಿ.ಕರೀಗೌಡ್ರ, ಮುತ್ತಣ್ಣ ಮುಶಿಗೇರಿ, ನಾಗರಾಜ ತಳವಾರ, ಶಂಕರ ಕಾಕಿ, ಮಾಂತೇಶ ಬಾತಾಖಾನಿ, ಶರಣು ಬರಶೆಟ್ಟಿ, ಹುಲ್ಲಪ್ಪ ಕೆಂಗಾರ, ಅರವಿಂದ ಅಣ್ಣಿಗೇರಿ, ನವೀನ ಕುರ್ತಕೋಟಿ, ಬಸವರಾಜ ನರೆಗಲ್, ವಸಂತ ಹಬೀಬ, ಕಾರ್ತಿಕ ಶಿಗ್ಲಿಮಠ, ದೇವೆಂದ್ರಪ್ಪ ಹೂಗಾರ, ಸಂಜೀವ ಖಟವಟೆ, ಚಂದ್ರಕಾAತ ಜೈನರ್, ಮೋಹನ ಕೋರಿ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.