

ಉಪ್ಪಿನಂಗಡಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ವಂಚಿಸುತ್ತಿದ್ದು, ರಾಜ್ಯದ ಎಲ್ಲ ಯೋಜನೆಗಳು ಅಪೂರ್ಣವಾಗಿವೆ. ಪುತ್ತೂರು-ಉಪ್ಪಿನಂಗಡಿ ಅಪೂರ್ಣ ರಸ್ತೆ ಕಾಮಗಾರಿಯಿಂದಾಗಿ ಜನರು ದಿನ ನಿತ್ಯ ಅವಘಡಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿಸಿದರು.
34 ನೆಕ್ಕಿಲಾಡಿ-ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ನೆೆಕ್ಕಿಲಾಡಿ ಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ ರಸ್ತೆತಡೆ ಪ್ರತಿಭಟನೆಯಲ್ಲಿ ಮಾತನಾಡಿ, ತನ್ನ ಶಾಸಕತ್ವದ ಅವಧಿಯಲ್ಲಿ ಬೊಳುವಾರು-34 ನೆಕ್ಕಿಲಾಡಿ ರಸ್ತೆಗೆ 20 ಕೋ. ರೂ. ಅನುದಾನ ಒದಗಿಸಿದ್ದು, ಕಳೆದ ಡಿಸೆಂಬರ್‌ನಲ್ಲಿ ಕೆಲಸ ಮುಗಿಯಬೇಕಾಗಿತ್ತು. ಕೆಲಸ ಕುಂಟುತ್ತಾ ಸಾಗಲು ಸರ್ಕಾರ ದಿವಾಳಿಯಂಚಿಗೆ ತಲುಪಿದ್ದೇ ಕಾರಣ ಎಂದರು.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಪಿಡಬ್ಲುೃಡಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕಾನಿಷ್ಕ ಬಂದು 12 ದಿನದೊಳಗೆ ಒಂದು ಲೇಯರ್ ಡಾಮರು ಹಾಕಿ ಕೊಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಮುಖಂಡರಾದ ಸುನೀಲ್ ಕುಮಾರ್ ದಡ್ಡು, ಮುಕುಂದ ಗೌಡ ಬಜತ್ತೂರು, ಪುರುಷೋತ್ತಮ ಮುಂಗ್ಲಿಮನೆ, ಎನ್.ಉಮೇಶ್ ಶೆಣೈ, ರಾಮಚಂದ್ರ ಪೂಜಾರಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಪ್ರಶಾಂತ್ ನೆಕ್ಕಿಲಾಡಿ, ಸುರೇಶ್ ಅತ್ರಮಜಲು, ನಾಗೇಶ್, ಸದಾನಂದ ನೆಕ್ಕಿಲಾಡಿ, ಸುಜಾತ ರೈ ಅಲಿಮಾರ್, ಸ್ವಪ್ನ ನೆಕ್ಕಿಲಾಡಿ, ಗೀತಾ ನೆಕ್ಕಿಲಾಡಿ, ಶಿವಾನಂದ ಕಜೆ, ರಮೇಶ್ ಸುಭಾಶ್‌ನಗರ, ಸದಾನಂದ ಶೆಟ್ಟಿ ಅಡೆಕ್ಕಲ್, ಹರೀಶ ದರ್ಬೆ, ಪ್ರಸಾದ್ ಭಂಡಾರಿ, ಸಂತೋಷ್ ಕುಮಾರ್ ಪಂರ್ದಾಜೆ, ಶಿವಪ್ಪ, ವಿದ್ಯಾಧರ ಜೈನ್, ಕೇಶವ ಸುಣ್ಣಾನ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ವೇಳೆ ಅರ್ಧ ಗಂಟೆ ಸಂಚಾರ ತಡೆಹಿಡಿಯಲ್ಪಟ್ಟಿತ್ತು. ಅನಾರೋಗ್ಯ ಪೀಡಿತರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹೆದ್ದಾರಿಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ತಕ್ಷಣವೇ ಕಾಮಗಾರಿ ನಿರ್ವಹಿಸಬೇಕು. ಇದೇ ರೀತಿಯ ಚಾಳಿ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಅರುಣ್‌ಕುಮಾರ್ ಪುತ್ತಿಲ, ಬಿಜೆಪಿ ಮುಖಂಡ https://www.vijayavani.net/mangalore-padavinangadi-bhatrakumeru-koragajja-kola-seve https://www.vijayavani.net/silver-jubilee-of-co-operative-society