ಕಾಂಗ್ರೆಸ್ ದಬ್ಬಾಳಿಕೆ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ - ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ ಕಾಂಗ್ರೆಸ್ - ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪ

PTR_28 AUG_3
Published on


ಪುತ್ತೂರು: ಸಂಘರ್ಷದಿಂದ ಹುಟ್ಟಿದ ಬಿಜೆಪಿ ಮತ್ತೆ ಆ ಹಾದಿಯನ್ನು ಹಿಡಿಯುವಂತೆ ಅಽಕಾರಿ ವರ್ಗ ಮಾಡಬಾರದು. ಅಽಕಾರಿಗಳ ದರ್ಪ ಹಾಗೂ ಸರ್ಕಾರದ ಅಽಕಾರ ದುರುಪಯೋಗವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಸಮಸ್ಯೆಗಳಾದಾಗ ಅಽಕಾರಿಗಳ ತಲೆದಂಡವಾಗುತ್ತಿದೆಯೇ ಹೊರತು, ಸಿಎಂ ಕುರ್ಚಿ ಬಿಟ್ಟುಕೊಟ್ಟು ವಿಚಾರಣೆಗೆ ಅವಕಾಶಮಾಡುತ್ತಿಲ್ಲ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ ಕಾಂಗ್ರೆಸ್‌ನವರಿಂದ ಬಿಜೆಪಿ ಪಾಠ ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.


ದರ್ಬೆ ಸರ್ಕಲ್‌ನಲ್ಲಿ ಸರ್ಕಾರದ ಹಗರಣಗಳ ವಿರುದ್ಧ ಮತ್ತು ಕಾಂಗ್ರೇಸ್ ನಾಯಕರ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಘಟಕ ಪುತ್ತೂರು ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.


ಮಾಜಿ ಶಾಸಕ ಸಂಜೀವ ಮಠಂದೂರು, ದಯಾನಂದ ಶೆಟ್ಟಿ ಉಜಿರೆಮಾರು, ಅರುಣ್ ಕುಮಾರ್ ಪುತ್ತಿಲ, ಆರ್. ಸಿ. ನಾರಾಯಣ, ಜೀವಂಧರ್ ಜೈನ್, ಬೂಡಿಯಾರ್ ರಾಧಾಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್, ಪಿ. ಜಿ. ಜಗನ್ನಿವಾಸ ರಾವ್, ವಿದ್ಯಾ ಗೌರಿ, ವಸಂತ ಲಕ್ಷ್ಮಿ, ದಿವ್ಯಾ ಪುರುಷೋತ್ತಮ, ಮುರಳಿಕೃಷ್ಣ ಹಸಂತಡ್ಕ, ಅಪ್ಪಯ್ಯ ಮಣಿಯಾಣಿ, ಮೋಹನದಾಸ್ ಉಕ್ಕುಡ, ಯುವರಾಜ್ ಪೆರಿಯಾತೋಡಿ, ಪ್ರಸನ್ನ ಮಾರ್ತಾ, ಹರೀಶ್ ಬಿಜತ್ರೆ, ಶಶಿಕಲಾ, ಮೋಹಿನಿ ವಿಶ್ವನಾಥ, ಜಯಶ್ರೀ ಶೆಟ್ಟಿ, ನಾಗೇಶ್ ಕೆಮ್ಮಾಯಿ, ಅನಿಲ್ ತೆಂಕಿಲ, ರಾಜೇಶ್ ಕುಮಾರ್ ಬಾಳೆಕಲ್ಲು, ಕರುಣಾಕರ ನಾಲ್ತೂಟ್ಟು ಮತ್ತಿತರರು ಉಪಸ್ಥಿತರಿದ್ದರು.


ಯುವಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಎಂ. ಸ್ವಾಗತಿಸಿದರು. ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆರ್. ಪ್ರಸ್ತಾವನೆಗೈದರು. ಆದರ್ಶ ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.


ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವಾಗುವ ಸಮಯ ಕಾಂಗ್ರೆಸ್‌ನವರು ಚಕಾರ ಎತ್ತುತ್ತಿಲ್ಲ. ಸಿದ್ದರಾಮಯ್ಯನವರಲ್ಲಿ ಭಿಕ್ಷೆ ಬೇಡಿದ ಕಾರಣದಿಂದ ಐವನ್‌ಗೆ ಎಂ.ಎಲ್.ಸಿ. ಸ್ಥಾನ ಲಭಿಸಿದೆ. ಈ ಕಾರಣದಿಂದ ಅವರನ್ನು ಮೆಚ್ಚಿಸುವ ಕೆಲಸಗಳನ್ನು ಮಾಡಲಾಗುತ್ತಿದ್ದೆ. ಕಾಯ್ದೆಯ ವಿವರನ್ನು ನೀಡಿದರೂ ಐವನ್ ಮೇಲೆ ಪ್ರಕರಣ ದಾಖಲಿಸಿಲ್ಲ.
| ಭರತ್ ಶೆಟ್ಟಿ, ಶಾಸಕರು


ರಸ್ತೆ ತಡೆದು ಪ್ರತಿಭಟನೆ
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆ ಹಾಗೂ ಪೇಟೆಯೊಳಗೆ ಬರುವ ರಸ್ತೆಯನ್ನು ದರ್ಬೆ ವೃತ್ತದಲ್ಲಿ ಸಂಪೂರ್ಣ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು. ವಾಹನಗಳ ಸಾಲು ಹೆಚ್ಚುತ್ತಿದ್ದಂತೆ ಪೊಲೀಸ್ ಅಽಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net