ಬಿಲಾವಲ್ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

CTD 17 BJP STRIKE--ee
Published on

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ- ಜರ್ದಾರಿ ವಿರುದ್ಧ ಬಿಜೆಪಿ ಕಾರ‌್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಮೂಲಕ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ‌್ಯಕರ್ತರು ಬಿಲಾವಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ,ಜಗತ್ತೇ ಮೆಚ್ಚಿರುವ,ವಿಶ್ವದ ಅಗ್ರಗಣ್ಯ ನಾಯಕ ಮೋದಿ ಅವರ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕು ಬಿಲಾವಲ್ ಅವರಿಗೆ ಇಲ್ಲ.

ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿ ರುವ ಪಾಕಿಸ್ತಾನವನ್ನು ಇಡೀ ವಿಶ್ವವೇ ಇಂದು ದೂರವಿಟ್ಟಿದೆ. ಬಿಲಾವಲ್ ಹೇಳಿಕೆ ಖಂಡಿಸಿ ದೇಶಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದ ಅವರು,ಪಾಕ್ ವಿದೇಶಾಂಗ ಸಚಿವ ಹೇಳಿಕೆ ಹಾಗೂ ಪಾಕಿಸ್ತಾನದ ಭ ಯೋತ್ಪಾದನೆ ಪರ ನಿಲುವನ್ನು ಕಟುವಾಗಿ ಖಂಡಿಸಿದರು.

ನರೇಂದ್ರ,ರೇಖಾ,ಸಂಪತ್,ಶಿವಣ್ಣಾಚಾರ್,ಕಲ್ಲೇಶಯ್ಯ,ವಸಂತ್‌ಲಕ್ಷ್ಮೀಸಾಗರ,ವೀರೇಶ್,ನಾಗರಾಜ್‌ಬೇದ್ರೆ,ವೆಂಕಟೇಶ್‌ಯಾದವ್,

ಬಸಮ್ಮ,ಮಂಜುಳಮ್ಮ,ಗೀತಮ್ಮ,ಲೀಲಾ,ವೀಣಾ,ಶಿವಪ್ರಸಾದ್,ಮಾರುತಿ,ರಮೇಶ್,ಮೂಡಲಗಿರಿಯಪ್ಪ,ನಾಗರಾಜ್‌ಸಂಗಂ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net