ಇಂಧನ ದರ ಏರಿಕೆ, ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ

17GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ಲೀಟರ್​ ಪೆಟ್ರೋಲ್​ಗೆ 3 ರೂ. ಹಾಗೂ ಡಿಸೇಲ್​ ಪ್ರತಿ ಲಿಟರ್​ಗೆ 3.50 ರೂ ಏರಿಸಿದ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಜಿಲ್ಲಾ ಬಿಜೆಪಿ ಟಕದ ವತಿಯಿಂದ ನಗರದ ಹಳೇ ಡಿಸಿ ಆಫೀಸ್​ ವೃತ್ತದಲ್ಲಿ ಸೋಮವಾರ ಬೃಹತ್​ ಪ್ರತಿಭಟನೆ ಮಾಡಲಾಯಿತು.
ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ತಮ್ಮ ಗ್ಯಾರಂಟಿಗಳನ್ನು ಪೂರೈಸಲು ಅಗತ್ಯ ವಸ್ತುಗಳ ಬೆಲೆಗಳನ್ನು ಅಧಿಕಗೊಳಿಸುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ಜೀವನ ನಡೆಸುವುದು ಹೊರೆ ಆಗುತ್ತಿದೆ. ವಿಶೇಷವಾಗಿ ಪೆಟ್ರೋಲ್​, ಡಿಸೇಲ್​ ಧರವನ್ನ ಹೆಚ್ಚಿಸುವುದರ ಮೂಲಕ ರಾಜ್ಯದ ಜನತೆಗೆ ಕಅಂಗ್ರೆಸ್​ ಸರ್ಕಾರ ಮಹಾ ಮೋಸ ಮಾಡಿದೆ. ನುಡಿದಂತೆ ನಡೆದ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಸಿಎಂ, ಡಿಸಿಎಂ ಅವರು ರಾಜ್ಯದ ಹಿತ ಕಾಪಾಡುವುದರಲ್ಲಿ ಸಂಪೂರ್ಣ ವಿಲರಾಗಿದ್ದಾರೆ. ಸರ್ಕಾರದ ಸಚಿವರುಗಳೆಲ್ಲಾ ಬೆಲೆ ಏರಿಕೆಯನ್ನು ಗಂಭಿರವಾಗಿ ತೆಗೆದುಕೊಳ್ಳದೇ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದ್ದು, ಇಂಧನ ಬೆಲೆ ಕಡಿಮೆ ಮಾಡದಿದ್ದರೆ ಭಾರತೀಯ ಜನತಾ ಪಾಟಿರ್ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಎಂ. ಎಸ್​. ಕರೀಗೌಡ್ರ ಮಾತನಾಡಿ ರಾಜ್ಯದ ಕಾಂಗ್ರೆಸ್​ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೂ ರಾಜ್ಯದ ಹಿತದೃಷ್ಟಿ ಕಾಪಾಡಲು ವಿಲವಾಗಿದೆ. ಕಾಂಗ್ರೆಸ್​ ಜನಪ್ರತಿನಿಧಿಗಳಿಗೆ ತಮ್ಮ ಖುಚಿರ್ಯನ್ನು ಭದ್ರಗೊಳಿಸುವ ಇಚ್ಚೆಯೊಂದು ಬಿಟ್ಟರೆ ಉಳಿದಂತೆ ರಾಜ್ಯದ ಜನರ ಆಗು ಹೋಗುಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ನಗರ ಮಂಡಲದ ಬಿಜೆಪಿ ಅಧ್ಯ ಅನೀಲ ಅಬ್ಬಿಗೇರಿ ಮಾತನಾಡಿ, ಕಅಂಗ್ರೆಸ್ಸಿನ ಪೊಳ್ಳು, ಸುಳ್ಳು ಗ್ಯಾರಂಟಿಗಳನ್ನು ಪೂರೈಸಲು ರಾಜ್ಯದ ಜನರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದೊಂದು ಮತಿಹೀನ ಸರ್ಕಾರ. ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಅಗತ್ಯ ವಸ್ತುಗಳ ಬೆಲೆಗಳನ್ನ ಮನಬಂದಂತೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದೆ.
ರಾವೇಂದ್ರ ಯಳವತ್ತಿ, ಲಿಂಗರಾಜ ಪಾಟೀಲ, ನಿಂಗಪ್ಪ ಮಣ್ಣೂರ, ಮುತ್ತು ಕಡಗದ, ಎಂ.ಎಂ. ಹಿರೇಮಠ, ಕಾಂತೀಲಾಲ ಬನ್ಸಾಲಿ, ಸಿದ್ದು ಪಲ್ಲೇದ, ವಿ. ಕೆ. ಗುರುಮಠ, ಸಂತೋಷ ಅಕ್ಕಿ, ಬೂದಪ್ಪ ಹಳ್ಳಿ, ಭದ್ರೇಶ ಕುಸ್ಲಾಪೂರ, ಗಂಗಾಧರ ಹಬೀಬ, ಕಿಷನ್​ ಮೇರವಾಡೆ, ರವಿ ದಂಡಿನ, ಬಸವರಾಜ ಸಂಗನಾಳ, ಅಶೋಕ ಕರೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net