ವಾಲ್ಮೀಕಿ ನಿಗಮ ಹಗರಣ, ಬಿಜೆಪಿ ಪ್ರತಿಭಟನೆ

01GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಕಂಡಿಸಿ ಬಿಜೆಪಿ ಯುವ ಮೋರ್ಚಾ ಹಾಗು ಎಸ್​ಟಿ. ಮೋರ್ಚಾ ವತಿಯಿಂದ ನಗರದ ಹಳೇಯ ಡಿಸಿ ಆಫೀಸ್​ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ರಾಜೀನಾಮೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು, ಕಾಂಗ್ರೆಸ್​ ಸರ್ಕಾರ ಭ್ರಷ್ಟರಿಗೆ ಮಣೆ ಹಾಕುತ್ತಿದೆ. ಭ್ರಷ್ಟರನ್ನು ರಸುತ್ತಿದೆ. ನುಡಿದಂತೆ ನಡೆಯುವ ಸರ್ಕಾರ ಎಂದು ೂಷಣೆ ಹಾಕುವ ಸಿಎಂ ಸಿದ್ದರಾಮಯ್ಯ ಅವರು ಕೊಲೆ, ಸುಲಿಗೆ, ಭ್ರಷ್ಟಾಚಾರ ಇವೆಲ್ಲವುಗಳನ್ನು ಹತೋಟೆಗೆ ತರಲು ವಿಲರಾಗಿದ್ದಾರೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯ ಸಂತೋಷ ಅಕ್ಕಿ ಮಾತನಾಡಿ, ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವದನ್ನು ಬಿಟ್ಟು ತನಿಖೆ ಆಧಾರಿಸಿ ರಾಜೀನಾಮೆಯನ್ನು ಪಡೆಯುತ್ತೇವೆ ಎಂದು ಕಾಂಗ್ರೆಸ್​ ಸರ್ಕಾರ ಕಾಲಹರಣ ಮಾಡುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ಭಾಗಿಯಾದ ನಾಗೇಂದ್ರ ಅವರ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಬೇಕು. ಈ ಹಗರಣವನ್ನು ಬಯಲಿಗೆಳೆದು ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರ್​ ಅವರ ಕುಟುಂಬಕ್ಕೆ ಸರ್ಕಾರ ಆಥಿರ್ಕ ನೆರವನ್ನು ನೀಡಬೇಕು ಎಂದು ಒತ್ತಾಯಿಸಿದರು. ರಾಜೀನಾಮೆ ಪಡೆಯದಿದ್ದರೆ ಪ್ರತಿ ತಾಲೂಕು ಕೇಂದ್ರ ಗಳಲ್ಲಿ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಭ್ರಷ್ಟಾಚಾರದಲ್ಲಿ ಮುಖ್ಯ ಪಾತ್ರ ವಹಿಸಿರುವ ಸಚಿವರು ಹಾಗು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಶಿೆ ಆಗಬೇಕು ಮತ್ತು ದುರಪಯೋಗವಾದ ಹಣವನ್ನು ಪುನಃ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಜಮೆ ಮಾಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಪ್ರತಿಭಟಿಸಲಾಗುವದು ಎಂದರು.
ಈಶ್ವರಪ್ಪ ರಂಗಪ್ಪನವರ, ಎಂ. ಎಸ್​. ಕರೀಗೌಡ್ರ, ಅನೀಲ ಅಬ್ಬಿಗೆರಿ, ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅಶೋಕ ನವಲಗುಂದ, ಅಶೋಕ ಕುಡತಿನಿ, ಸುಧೀರ ಕಾಟಿಗರ, ಗಂಗಾಧರ ಹಬೀಬ, ರಾು ಪರಾಪೂರ, ಶಶಿಧರ ದಿಂಡೂರ, ನಾಗರಾಜ ಕುಲಕಣಿರ್, ಸುರೇಶ ಚಿತ್ತರಗಿ, ಸುರೇಶ ಮರಳಪ್ಪನವರ, ನಾಗರಾಜ ತಳವಾರ ಕಮಲಾ ಅಂಗಡಿ, ಯೋಗೇಶ್ವರಿ ಭಾವಿಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net