ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಶ್ರಮ

nela
ಪದಾಧಿಕಾರಿಗಳ ಪದಗ್ರಹಣ
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಯುವ ಸಮುದಾಯವನ್ನು ತಾಲೂಕಿನಾದ್ಯಂತ ಸಂಘಟಿಸಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಬಿಜೆಪಿ ತಾಲೂಕು ಯುವಮೋರ್ಚಾ ನೂತನ ಅಧ್ಯಕ್ಷ ಎಸ್.ಮಹೇಶ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಬಳಿಯ ಖಾಸಗಿ ಹೋಟೇಲ್‌ನಲ್ಲಿ ಆಯೋಜಿಸಿದ್ದ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡುತ್ತಿರುವ ಬಿಜೆಪಿ ನಡೆ ಮಾದರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು, ಲೋಕಸಭೆ ಚುನಾವಣೆ ಎದುರಿಸಲು ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದರು.
ಮುಂಬರುವ ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯಿತಿ, ಡೇರಿ, ಗ್ರಾಮಪಂಚಾಯಿತಿ ಸೇರಿ ವಿವಿಧ ಚುನಾವಣೆಯ ಪಕ್ಷದ ಗೆಲುವಿಗೆ ಶ್ರಮವಹಿಸುತ್ತೇವೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ ಮಾತನಾಡಿ, ದೇಶದಾದ್ಯಂತ ಬಿಜೆಪಿ ಯುವ ಜತೆಗೆ ಹೆಚ್ಚಿನ ಸ್ಥಾನ ಮಾನ ನೀಡುತ್ತಿರುವ ಏಕೈಕವಾಗಿ ಗುರುತಿಸಿಕೊಂಡಿದೆ. ತಾಲೂಕಿನಾದ್ಯಂತ ಯುವ ಪಡೆಯನ್ನು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ತಂಡ ಸಿದ್ಧವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net