ಪ್ರಿಯಾಂಕ ಖರ್ಗೆಗೆ 3 ದಿನದ ಗಡುವು ನೀಡಿದ ಬಿಜೆಪಿ ಮಹಿಳಾ ಮೋರ್ಚಾ

bjppppp
Published on

ಚಿತ್ರದುರ್ಗ: ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾ ರೆಡ್ಡಿ ಆಪಾದಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಡೀ ಮಹಿಳಾ ಕು ಲಕ್ಕೆ ಅವಮಾನವಾಗುವಂತೆ ಮಾತನಾಡಿದ್ದರೂ ಈವರೆಗೂ ಅವರು ಕ್ಷಮೆ ಯಾಚಿಸಿಲ್ಲ. ಆದ್ದರಿಂದ ಕ್ಷಮೆ ಯಾಚಿಸುವಂತೆ ಪ್ರಿಯಾಂಕ ಖರ್ಗೆ ಅವರನ್ನು ಒತ್ತಾಯಿಸಿ ತಮ್ಮ ಶೀಘ್ರದಲ್ಲೇ ಚಿತ್ತಾಪುರ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.

ಸರ್ಕಾರಿ ನೌಕರಿ ಬೇಕಾದರೆ ಮಂಚ ಏರಬೇಕೆಂಬ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ವಿರುದ್ದ ಕಳೆದ ಆ.18ರಂದು ನಗರದಲ್ಲಿ ಪ್ರತಿಭ ಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯಾದ್ಯಂತ ಮಹಿಳೆಯರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರೂ ಕ್ಷಮೆ ಕೇಳಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು. 2-3 ದಿನದೊಳವಗೆ ಅವರು ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ ಮೂಲಕ ಹೋರಾಟ ತೀವ್ರ ಗೊಳಿಸುವುದಾಗಿ ಎಚ್ಚರಿಸಿದರು.

ಪ್ರಿಯಾಂಕ ಖರ್ಗೆ ಕುಟುಂಬದಲ್ಲಿ ಯಾವೊಬ್ಬ ಮಹಿಳೆಯೂ ನೌಕರಿ ಮಾಡುತ್ತಿಲ್ಲವೆ ಎಂದು ಪ್ರಶ್ನಿಸಿದ ಶೈಲಜಾರೆಡ್ಡಿ,ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸೇವಾ ಮನೋಭಾವನೆಯಿಂದ ದುಡಿಯುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರ ಮಾತು ಮಹಿಳೆಯರ ಆತ್ಮ ಗೌರಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಮ್ಮ,ಭಾರತಿ ಹರೀಶ್,ಪಾರ್ವತಮ್ಮ,ನಾಗರಾಜ್‌ಬೇದ್ರೆ ಇದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net