ಬಿಜೆಪಿ ಹೊಸ ತಂಡ ತಯಾರು

BJP prepares a new team
Published on

ಮಡಿಕೇರಿ:

ಲೋಕಸಭಾ ಚುನಾವಣೆ ಎದುರಿಸಲು ಕೊಡಗು ಜಿಲ್ಲೆ ಬಿಜೆಪಿಯ ಹೊಸ ಟೀಮ್ ತಯಾರಾಗಿದೆ. ಕಳೆದ ವಾರವಷ್ಟೇ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ನಾಪಂಡ ರವಿ ಕಾಳಪ್ಪ ತಮ್ಮ ಹೊಸ ತಂಡವನ್ನು ರಚಿಸಿದ್ದಾರೆ. ಪಕ್ಷ ಸಂಘಟನೆಗೆ ಒತ್ತುಕೊಟ್ಟು ನೂತನ ತಂಡ ರಚಿಸಲಾಗಿದ್ದು, ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಆದ್ಯತೆ ನೀಡಲಾಗಿದೆ.

ಉಪಾಧ್ಯಕ್ಷರಾಗಿ ಹೆಚ್.ಕೆ. ಮಾದಪ್ಪ, ಅರುಣ್ ಭೀಮಯ್ಯ, ಕಿಲನ್ ಗಣಪತಿ, ಆರ್.ಕೆ. ಚಂದ್ರು, ಭವ್ಯಾ ಅಪ್ಪಡೇರಂಡ, ಕಾಂಗೀರ ಸತೀಶ್ ಅಶ್ವಿನ್, ಮನು ಮಂಜುನಾಥ್ ಹಾಗೂ ಮನು ಕುಮಾರ್ ರೈ ಅವರನ್ನು ನೇಮಿಸಲಾಗಿದೆ. ಮಹೇಶ್ ಜೈನಿ, ವಿ.ಕೆ. ಲೋಕೇಶ್, ಚಲನ್ ಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ.
ಪ್ರಶಾಂತ್ ಭೀಮಯ್ಯ, ಕನ್ನಿಕೆ, ಮಲಚೀರ ಕವಿತ, ಉಮಾ ಪ್ರಭು, ಇಂದಿರಾ ರಮೇಶ್, ಅನಂತ್ ಕುಮಾರ್, ಜಯವರ್ಧನ, ಬೀನಾ ಬೊಳ್ಳಮ್ಮ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ.

ಕನ್ನಂಡ ಸಂಪತ್ ಅವರನ್ನು ಕೋಶಾಧಿಕಾರಿಯಾಗಿ ನೇಮಿಸಲಾಗಿದ್ದು, ಮಾಧ್ಯಮ ಪ್ರಮುಖ್ ಆಗಿ
ದೀಪಕ್, ಸಜೀಲ್ ಕೃಷ್ಣನ್ ಅವರನ್ನು ನೇಮಿಸಲಾಗಿದೆ. ಪಕ್ಷದ ಜಿಲ್ಲಾ ವಕ್ತಾರರಾಗಿ ಬಿ.ಕೆ. ಅರುಣ್ ಕುಮಾರ್,
ತಳೂರು ಕಿಶೋರ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ ಕಾರ್ಯನಿರ್ವಹಿಸಲಿದ್ದಾರೆ.
ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಚಿನ್ ಪೆಮ್ಮಯ್ಯ, ಶಿವಕುಮಾರ್ ನಾಣಯ್ಯ, ಸಹಸಂಚಾಲಕರಾಗಿ ದರ್ಶನ್, ಸಂಪ್ರೀತ್ ನೇಮಕವಾಗಿದ್ದಾರೆ.

ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಅನಿತಾ ಪೂವಯ್ಯ, ಯುವ ಮೋರ್ಚಾ ಅಧ್ಯಕ್ಷರಾಗಿ
ಮಹೇಶ್ ತಿಮ್ಮಯ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಪ್ಪು ರವೀಂದ್ರ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಮುಗೇರ ರವಿ, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಪರಮೇಶ್ವರ, ರೈತ ಮೋರ್ಚಾ ಅಧ್ಯಕ್ಷರಾಗಿ ಅಜ್ಜಿಕುಟೀರ ಪ್ರವೀಣ್ ಹಾಗೂ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಜೋಸ್ ಮಟ್ಟಂ ಅವರನ್ನು ನೇಮಿಸಲಾಗಿದೆ.

ಮಡಿಕೇರಿ ನಗರ ಮಂಡಲ ಅಧ್ಯಕ್ಷರಾಗಿ ಉಮೇಶ್ ಸುಬ್ರಮಣಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ವಿರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಸುವಿನ್ ಗಣಪತಿ ಹಾಗೂ ಸೋಮವಾರಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಗೌತಮ್ ಗೌಡ ಅವರನ್ನು ನೇಮಿಸಿರುವುದಾಗಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net