

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಅಽಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ನಿರಂತರ ಕಿರುಕುಳ ನೀಡಿದ್ದು ಬಾಕಿ ಬಿಲ್ ಬಿಡುಗಡೆಗೆ ೧ ಕೋಟಿ ರೂಪಾಯಿ ನೀಡುವಂತೆ ದಿನನಿತ್ಯ ಪೀಡಿಸುತ್ತಿದ್ದ ಎಂಬುದಾಗಿ ಉಲ್ಲೇಖಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರಭಾವದಿಂದಾಗಿ ಇದೆಲ್ಲ ಆಗಿದೆ ಎಂದು ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಬಿಜೆಪಿ ವತಿಯಿಂದ ಸರ್ಕಾರದ ಭ್ರಷ್ಟಾಚಾರ ತುಂಬಿದ ದುರಾಡಳಿತ, ಬಾಣಂತಿಯರ ಸಾವು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಂಪುಟದಿಂದ ವಜಾಗೊಳಿಸಿ ಪ್ರಕರಣದ ದಾಖಲಿಸಬೇಕು ಜತೆಗೆ ಗುತ್ತಿಗೆದಾರ ಸಚಿನ್ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ. ಬಿ., ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ನಗರ ಮಂಡಲ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ರಾಜೇಶ ಪರ್ಪುಂಜ, ಒಳಮೊಗ್ರು ಶಕ್ತಿಕೇಂದ್ರ ಅಧ್ಯಕ್ಷ ಮಾಧವ ರೈ ಕುಂಬ್ರ, ಹಿರಿಯರಾದ ಸುರೇಶ್ ಆಳ್ವ, ನಗರ ಮಂಡಲದ ಗೋವರ್ಧನ್, ದರ್ಬೆ ಮಹಾಶಕ್ತಿಕೇಂದ್ರ ಅಧ್ಯಕ್ಷೆ ದೀಕ್ಷಾ ಪೈ, ಆರ್ಯಾಪು ಮಹಾಶಕ್ತಿಕೇಂದ್ರ ಅಧ್ಯಕ್ಷ ವಿಜಯ ಬಿ.ಎಸ್, ಪುಣಚ ಮಹಾಶಕ್ತಿಕೇಂದ್ರದ ರಾಜೇಶ್ ಬಾಳೆಕಲ್ಲು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪ್ರಕಾಶ್ಚಂದ್ರ ರೈ ಕೈಕಾರ, ಉಮೇಶ್ ಗೌಡ, ವಿನೋದ್ ಕುಮಾರ್ ಶೆಟ್ಟಿ ಅರಿಯಡ್ಕ, ವಸಂತ ಕುಮಾರ್, ರಾಜೀವಿ ರೈ, ಅಮರನಾಥ ರೈ, ಸಂತೋಷ್ ಆಳ್ವ, ಶಿವರಾಮ ಗೌಡ, ಮಲ್ಲಿಕಾ, ಶ್ರೀನಿವಾಸ ಪ್ರಸಾದ್, ಯುವ ಮೋರ್ಛದ ಪವನ್, ಸನ್ಮಿತ್ ರೈ, ಮಾಧ್ಯಮ ಸಂಚಾಲಕ ಮಹೇಶ್ ರೈ ಕೇರಿ ಉಪಸ್ಥಿತರಿದ್ದರು.