

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಬಾರ್ಯ, ತೆಕ್ಕಾರು, ಪುತ್ತಿಲ ಶಕ್ತಿಕೇಂದ್ರ ಪಂಚಾಯಿತಿ ಮಟ್ಟದ ಅಭ್ಯಾಸ ವರ್ಗ ಸಭೆ ಬಾರ್ಯದಲ್ಲಿ ನಡೆಯಿತು.
ಹಿರಿಯ ಕಾರ್ಯಕರ್ತ ಗೋಪಾಲಕೃಷ್ಣ ಅಯ್ಯರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯೆ ಅನಿತಾ ಕುಶಾಲಪ್ಪ ಗೌಡ ಮಾತನಾಡಿದರು. ಪ್ರಮುಖರಾದ ರಾಜೇಶ್ ಪೆರ್ಮುಡ, ಗೋಪಾಲಕೃಷ್ಣ , ಜೋಯಲ್ ಮಂಡೋನ್ಸ ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆ ಕುರಿತು ಸಮಾಲೋಚನೆ ನಡೆಸಿದರು.
ಬಾರ್ಯ ಕೃಷಿ ಪತ್ತಿನ ಅಧ್ಯಕ್ಷ ಪ್ರವೀಣ್ ರೈ, ತಣ್ಣೀರುಪಂಥ ಕೃಷಿ ಪತ್ತಿನ ಅಧ್ಯಕ್ಷ ಜಯಾನಂದ ಕಲ್ಲಾಪು, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೆಂಕ್ಯಾರ್, ಶಕ್ತಿಕೇಂದ್ರ ಅಧ್ಯಕ್ಷ ನವೀನ್ ರೈ, ರಾಜೇಶ್ ರೈ, ಪ್ರವೀಣ್ ಬೇಂಗಿಲ, ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.