ಶ್ರೀಕಾಂತ ಹೆಸರಲ್ಲಿ ಬಿಜೆಪಿ ರಾಜಕಾರಣ

Dinesh gundurao
Published on

ಹುಬ್ಬಳ್ಳಿ: ನಮಗೆ ಶ್ರೀಕಾಂತ ಪೂಜಾರ ಯಾರೆಂಬುದು ಗೊತ್ತಿಲ್ಲ. ಆತನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕಾಂತ ಹೆಸರಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಇದರ ಬದಲು ಕೇಂದ್ರದಿಂದ ಬರುವ ಜಿಎಸ್‌ಟಿ ಹಣದ ಪಾಲಿಗಾಗಿ ಹೋರಾಟ ಮಾಡಬೇಕು. ಕೇಂದ್ರದಿಂದ ಒಂದು ರೂಪಾಯಿ ಹಣ ಬಂದಿಲ್ಲ. ಮೋದಿ ಸರ್ಕಾರದಿಂದ ನಮಗೆ ಅನ್ಯಾಯ ಆಗಿದೆ ಎಂದರು.
ಶ್ರೀಕಾಂತ ಪೂಜಾರ ರೌಡಿಶೀಟರ್, ಕ್ರಿಮಿನಲ್. ಆತನ ಮೇಲಿರೋ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿರೋದು ಕಾಂಗ್ರೆಸ್ ಸರ್ಕಾರ. ಕೋರ್ಟ್ ಆದೇಶದ ಮೇರೆಗೆ ಆತನನ್ನು ಬಂಧಿಸಲಾಗಿದೆ. ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಷಯ. ಪ್ರತಿ ಗ್ರಾಮದಲ್ಲೂ ರಾಮ ಮಂದಿರಗಳಿವೆ. ಹಿಂದುತ್ವ ಒಬ್ಬರ ಆಸ್ತಿ ಅಲ್ಲ, ಹಿಂದುತ್ವಕ್ಕೆ ಇತಿಹಾಸವಿದೆ ಎಂದು ವ್ಯಾಖ್ಯಾನಿಸಿದರು.
ಹೆಚ್ಚು ಕೋವಿಡ್ ಟೆಸ್ಟ್: ಬೇರೆ ರಾಜ್ಯಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಸಹಜವಾಗಿ ಸ್ವಲ್ಪ ಕೇಸ್ ಜಾಸ್ತಿ ಆಗಿವೆ. ಸುಮಾರು 7 ಸಾವಿರ ಟೆಸ್ಟಿಂಗ್ ಮಾಡಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ವಯೋವೃದ್ಧರು, ಬೇರೆ ಬೇರೆ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net