ಅಭಿವೃದ್ಧಿಯೊಂದಿಗೆ ಋಣ ತೀರಿಸ್ತೀನಿ: ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿಕೆ

06_02_Mdy_08(Bjp)
Published on

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನ ನಡೆಯಿತು. ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸ್ವಾಗತಿಸಿದರು. ಗ್ರಾಮದ ಹೆಬ್ಬಾಗಿಲಿನಿಂದ ರಾಮಮಂದಿರ ದೇವಾಲಯದವರೆಗೆ ತೆರೆದ ವಾಹನದಲ್ಲಿ ರ‌್ಯಾಲಿ ನಡೆಸಿದ ಸಚ್ಚಿದಾನಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಹಾಗೂ ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಒಳಗೊಂಡ ಕರಪತ್ರ ಹಂಚಿ, ಸ್ಟಿಕ್ಕರ್‌ಗಳನ್ನು ಗೋಡೆಗಳಿಗೆ ಅಂಟಿಸುವ ಮೂಲಕ ಜನರಿಗೆ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ರಾಜಕಾರಣದಲ್ಲಿ ನಮ್ಮ ಕುಟುಂಬದಿಂದ ನಾನೇ ಮೊದಲಿಗ, ನಾನೇ ಕೊನೆ. ನನ್ನ ಪತ್ನಿ, ಮಕ್ಕಳು ಯಾರನ್ನೂ ರಾಜಕೀಯಕ್ಕೆ ತರುವುದಿಲ್ಲ ಎನ್ನುವ ಮೂಲಕ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ನೀಡುವ ಮತ ಎಂದಿಗೂ ವ್ಯರ್ಥ ಆಗಲ್ಲ. ಅಭಿವೃದ್ಧಿ ಮುಖಾಂತರ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಪ್ರಪಂಚವೇ ಒಪ್ಪಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ. ಈ ಬಾರಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಕಬ್ಬನಹಳ್ಳಿ ರಾಮಚಂದ್ರು, ಬೇವಿನಹಳ್ಳಿ ಮಹೇಶ್, ಹುಲ್ಕೆರೆ ಯೋಗಾನಂದ ಪಟೇಲ್, ಕೊತ್ತತ್ತಿ ಗ್ರಾಮದ ಚೌಡಪ್ಪ, ಸುಗೇಂದ್ರ, ಚೇತನ್, ಯೋಗೇಶ್, ಕುಳ್ಳಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net