

ಮಂಡ್ಯ: ರಾಜ್ಯ ಸರ್ಕಾರದ ಸಾಧನೆ ಕುರಿತು ಬಿಜೆಪಿಗರು ನಗರದ ಗೋಡೆಗಳ ಮೇಲೆ ಬರೆದಿರುವ ಬರಹಗಳ ಮೇಲೆ ಕಾಂಗ್ರೆಸ್‌ನಿಂದ ಪೋಸ್ಟರ್ ಅಂಟಿಸುವ ಅಭಿಯಾನ ಭಾನುವಾರ ನಡೆಯಿತು.
ನಗರದ ವಿವಿಧೆಡೆ ಬರೆದಿರುವ ಸರ್ಕಾರದ ಸಾಧನೆಗಳ ಬರಹದ ಮೇಲೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ ನೇತೃತ್ವದಲ್ಲಿ ‘ಭರವಸೆ, ಭರವಸೆ, ಬುರುಡೆ ಭರವಸೆ ಸಾಕು’ ಎಂಬ ಪೋಸ್ಟರ್ ಅಂಟಿಸಲಾಯಿತು. ಮಾತ್ರವಲ್ಲದೆ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಜನರಿಗೆ ಬಿಜೆಪಿ ನೀಡುತ್ತಿರುವ ಬುರುಡೆ ಭರವಸೆ ಬೇಡವೆಂದು ಘೋಷಣೆ ಕೂಗಲಾಯಿತು.