ತತ್ವ-ಸಿದ್ಧಾಂತಕ್ಕೆ ಬದ್ಧವಾದ ಪಕ್ಷ

PRATAPAGOUDA PATILA MLA 2022
Published on

ಕವಿತಾಳ: ತೋರಣದಿನ್ನಿ ಗ್ರಾಪಂ ವ್ಯಾಪ್ತಿಯ ಗೂಗೆಬಾಳದಲ್ಲಿ ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಾರ್ಯಕರ್ತರ ಸಭೆ ಭಾನುವಾರ ನಡೆಸಿದರು. ಬಿಜೆಪಿ ತತ್ವ-ಸಿದ್ಧಾಂತಕ್ಕೆ ಬದ್ಧವಾದ ಪಕ್ಷವಾಗಿದೆ ಎಂದು ಪ್ರತಾಪಗೌಡ ಪಾಟೀಲ್ ತಿಳಿಸಿದರು. ವಿನಯಕುಮಾರ, ಮಂಜುನಾಥ ಹುಡೇದ, ಭೀಮಣ್ಣ ಅರೋಲಿ, ಲಿಂಗಪ್ಪ ಹಟ್ಟಿ, ಸಾಬಣ್ಣ ಮಡಿವಾಳ, ದೇವರಾಜ ಮಡಿವಾಳ, ಪಂಪಾಪತಿ ಎಮ್, ಹುಚ್ಚರಡ್ಡಿ ದಿನ್ನಿ, ನಾಗರಾಜ ಪೊ.ಪಾ., ರಮೇಶ ಕುಲ್ಕರ್ಣಿ, ಚಿದಾನಂದ, ಹನುಮಂತ ಚಲವಾದಿ, ರಂಗಪ್ಪ, ಮಲ್ಲಪ್ಪ ಜೀಪ್, ಲಿಂಗಣ್ಣ ಹಟ್ಟಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಚಿಲ್ಕರಾಗಿ, ತಾಪಂ ಮಾಜಿ ಸದಸ್ಯ ಶಿವುಕುಮಾರ ಸಾಹುಕಾರ, ಶರಣಪ್ಪ ಶ್ಯಾವಂತಗೇರಿ, ಶರಣಪ್ಪ ತಾತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net