ಪೆಟ್ರೋಲ್​, ಡಿಸೆಲ್​ ಬೆಲೆ ಏರಿಕೆ ಖಂಡನೆ

15GDG06
Published on

ಗದಗ: ರಾಜ್ಯ ಕಾಂಗ್ರೇಸ್​ ಸರ್ಕಾರ ಪ್ರತಿ ಲೀಟರ್​ ಪೆಟ್ರೋಲ್​ಗೆ 3 ರೂ, ಹಾಗೂ ಡಿಸೈಲ್​ ಪ್ರತಿ ಲಿಟರ್​ಗೆ 3.50 ರೂ, ಏರಿಸಿ ಜನರ ಮೇಲೆ ದೊಡ್ಡ ಹೊರೆಯನ್ನು ಹೊರೆಸಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ. ಎಂ. ಹಿರೇಮಠ ಹೇಳಿದ್ದಾರೆ
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ತಣವೇ ಜಾರಿಗೆ ಬರುವ ಹಾಗೆ ಪೆಟ್ರೋಲ್​, ಡಿಸೈಲ್​ ಧರವನ್ನು ಎರಿಸಿ ಜನರಿಗೆ ಗಾಯದ ಮೇಲೆ ಬರೆಯನ್ನು ಎಳೆದಿದ್ದಾರೆ. ಲೋಕಸಭಾ ಚುನಾವಣಾ ಮುಗಿದ ಕೂಡಲೇ ರಾಜ್ಯ ಸರ್ಕಾರ ತನ್ನ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೆಟ್ರೋಲ್​ ಹಾಗು ಡಿಸೈಲ್​ ಬೆಲೆ ಎರಿಕೆಯಿಂದ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುವದು. ಇದರಿಂದ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗುವದು. ಈಗಾಗಲೇ ರಾಜ್ಯ ಸರ್ಕಾರ ಆಸ್ತಿ ತೆರಿಗೆ, ಸ್ಟಾಂಪ್​ ಡ್ಯೂಟಿ ಹೆಚ್ಚಿಗೆ ಮಾಡಿ ಜನರಿಗೆ ಹೊರೆಯಾಗಿಸಿದೆ. ಬಿಟ್ಟಿ ಭಾಗ್ಯಗಳಿಂದ ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿ ಬೆಲೆ ಏರಿಸಿ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಏರಿಸಿದ ಪೆಟ್ರೋಲ್​, ಡಿಸೈಲ್​ ಬೆಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಎಂ.ಎಂ.ಹಿರೇಮಠ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net