ಬಿಜೆಪಿ ಅವಧಿಯ ಸಾಲ ಕಾಂಗ್ರೆಸ್‌ನಿಂದ ಭರ್ತಿ

3SND-01
Published on

ಸಿಂಧನೂರು: ತಾಲೂಕಿನ ನೀರಾವರಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಅನುದಾನ ತರಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ನೀರಾವರಿ ಅಭಿವೃದ್ಧಿಗೆ ಕಾಳಜಿ ವಹಿಸಲಾಗಿದ್ದು, ಅನೇಕ ಸಭೆಗಳನ್ನು ನಡೆಸಲಾಗಿದೆ. ಬರ ನಿರ್ವಹಣೆಯೊಂದಿಗೆ ಜನಪರ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ್ದಾರೆ ಎಂದರು.

ಬಿಜೆಪಿ ಅವಧಿಯಲ್ಲಿ ಆಗಿರುವ ಸಾಲವನ್ನು ಕಾಂಗ್ರೆಸ್ ಸರ್ಕಾರ ಭರಿಸುತ್ತಿದೆ. ಇದರೊಂದಿಗೆ ಸಂಪನ್ಮೂಲ ಕ್ರೋಡೀಕರಣ ಮಾಡಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜಿಪಂ, ತಾಪಂ ಚುನಾವಣೆಗೆ ನಾವೆಲ್ಲ ಸಜ್ಜುಗೊಳ್ಳಬೇಕಿದ್ದು, ಕಾರ್ಯಕರ್ತರು ಸಿದ್ಧರಿರಬೇಕು. ಡಿ.19 ರಂದು ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಸಚಿವರು ಆಗಮಿಸಲಿದ್ದು ಈ ಬಗ್ಗೆಯೂ ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಬಾದರ್ಲಿ ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ ಜಹಗೀರದಾರ್, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಶಿವನಗೌಡ ಎಲೆಕೂಡ್ಲಿಗಿ, ಬಸವರಾಜ ಹಿರೇಗೌಡ, ಹನುಮಂತರಡ್ಡೆಪ್ಪ, ಎಂ.ಕಾಳಿಂಗಪ್ಪ, ಆರ್.ತಿಮ್ಮಯ್ಯ ನಾಯಕ, ಲಿಂಗರಾಜ ಪಾಟೀಲ್, ಎನ್.ಅಮರೇಶ, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಸದಸ್ಯ ಶೇಖರಪ್ಪ ಗಿಣಿವಾರ, ಅಶೋಕ ಉಮಲೂಟಿ, ನಾಗವೇಣಿ ಪಾಟೀಲ್, ಶ್ರೀದೇವಿ ಶ್ರೀನಿವಾಸ, ಬಸಮ್ಮ, ಪಂಪನಗೌಡ ತಾವರಗೇರಾ, ಲಿಂಗಪ್ಪ ದಢೇಸುಗೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net