ಬಿಜೆಪಿಯವರಿಂದ ಪಂಚ ಗ್ಯಾರಂಟಿ ಕಾಪಿ

21 KAMPLI 01
ಕಣವಿ ತಿಮ್ಮಲಾಪುರದ ಸಹಿಪ್ರಾ ಶಾಲೆಯಲ್ಲಿ ಆರು ತರಗತಿ ಹಾಗೂ ಅಡುಗೆ ಕೋಣೆ ನಿರ್ಮಿಸುವಂತೆ ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ಶಿಕ್ಷಕರು ಮನವಿ ಸಲ್ಲಿಸಿದರು. ಮುಖ್ಯಶಿಕ್ಷಕ ವಿಶ್ವನಾಥ, ಪ್ರಮುಖರಾದ ಉಳ್ಳೂರು ಪಕ್ಕೀರಪ್ಪ, ಪರಶುರಾಮ ಪವಾರ್, ಅಶ್ವಿನಿ, ಪಿ.ಪಾರ್ವತಿ, ಮಹಾದೇವಿ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಮೆಟ್ರಿ, ಮಾವಿನಹಳ್ಳಿ, ಕಣವಿತಿಮ್ಮಲಾಪುರದಲ್ಲಿ ಕೆ.ಕೆ.ಆರ್.ಡಿ.ಬಿಯ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಸೋಮವಾರ ಭೂಮಿಪೂಜೆ ನೆರವೇರಿದರು.

ಪಂಚ ಗ್ಯಾರಂಟಿ ಬಡವರ ಯೋಜನೆಗಳಾಗಿದ್ದು, ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿಯವರು ಬೇರೆ ರಾಜ್ಯಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು. ಹಿರೇ ಜಾಯಿಗನೂರಿನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಪಿಡಿಒ ಶ್ರೀಶೈಲ, ಮೆಟ್ರಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಪ್ರಮುಖರಾದ ಉಳ್ಳೂರು ಪಕ್ಕೀರಪ್ಪ, ಟಿ.ರಾಮಯ್ಯ, ರೇಣುಕಪ್ಪ, ಮಾವಿನಹಳ್ಳಿಯ ವಿ.ರಮೇಶ, ಕಟ್ಟೆಪ್ಪ, ಎಸ್.ಉಮೇಶ, ಜಿ.ಹನುಮಂತಪ್ಪ, ಸಿ.ವಿರುಪಣ್ಣ, ಚಂದ್ರಪ್ಪ, ಹೊಸಕೋಟೆ ಜಗದೀಶ, ಹೊನ್ನಳ್ಳಿ ಗಂಗಾಧರ, ಎಚ್.ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net