ಕಾಂಗ್ರೆಸ್ ಮುಖಂಡನ ಹೇಳಿಕೆಗೆ ಬಿಜೆಪಿ ಆಕ್ರೋಶ

04-05-Shiva-2
ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ವಿವಾದಾತ್ಮಕ ಹೇಳಿಕೆ ಖಂಡಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ಬಿಜೆಪಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶಾಸಕ ಡಾ.ಶಿವರಾಜ ಪಾಟೀಲ್, ಮುಖಂಡರಾದ ರಾಘವೇಂದ್ರ ಉಟ್ಕೂರು, ಈ.ಶಶಿರಾಜ, ಯು.ನರಸಿಂಹಲು, ರಾಮಚಂದ್ರ ಕಡಗೋಲ, ನರಸಪ್ಪ ಯಕ್ಲಾಸಪುರ, ತಿರುಮಲ ರೆಡ್ಡಿ ಇದ್ದರು.
Published on

ರಾಯಚೂರು: ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿಗೆ ಮನವಿ ಸಲ್ಲಿಸಿ, ಶ್ರೀರಾಮ ಭಕ್ತರಿಗೆ ನೋವುಂಟು ಮಾಡುವ ಹೇಳಿಕೆ ನೀಡಿರುವ ಬಷೀರುದ್ದೀನ್‌ನನ್ನು ಬಂಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೈ ಶ್ರೀರಾಮ ಘೋಷಣೆ ಕೂಗಿದವರಿಗೆ ಪೊಲೀಸರು ಬೂಟುಗಾಲಿನಿಂದ ಒದೆಯಬೇಕು ಎಂದು ಬಷೀರುದ್ದೀನ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಸಮಾಜದ ಸ್ವಾಸ್ತ್ಯ ಹಾಳಾಗಲಿದ್ದು, ದ್ವೇಷ ಹುಟ್ಟಿಸುವ ಕೆಲಸವಾಗಿದೆ. ವಿಡಿಯೋವನ್ನು ಎ್ಎಸ್‌ಎಲ್ ಪರಿಶೀಲನೆಗೆ ಒಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಲು ಅಕಾರಿಗಳು ಆಗಮಿಸ ಕಾರಣ ಪ್ರತಿಭಟನಾಕಾರರು ದಿಢೀರ್ ಸಂಚಾರ ನಡೆಸಿ, ಚಪ್ಪಲಿ ಪ್ರದರ್ಶನ ಮಾಡಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ನಂತರ ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಆಗಮಿಸಿ ಮನವಿ ಸ್ವೀಕರಿಸಿದ ನಂತರದಲ್ಲಿ ಪರಿಸ್ಥಿತಿ ಹತೋಟಿ ಬಂತು. ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಮುಖಂಡರಾದ ರಾಘವೇಂದ್ರ ಉಟ್ಕೂರು, ಈ.ಶಶಿರಾಜ, ಯು.ನರಸಿಂಹಲು, ರಾಮಚಂದ್ರ ಕಡಗೋಲ, ನರಸಪ್ಪ ಯಕ್ಲಾಸಪುರ, ತಿರುಮಲ ರೆಡ್ಡಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net