ಪ್ರಧಾನಿ ಜನ್ಮದಿನಕ್ಕೆ ಬಿಜೆಪಿಯಿಂದ ರಕ್ತದಾನ ಶಿಬಿರ

New bjp blood camp new
Published on

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವತಿಯಿಂದ ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರನಗರದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಟೆಂಗಿನಕಾಯಿ, ವಿಶ್ವ ನಾಯಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ. ಮೋದಿ ಅವರು ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿದ್ದು, ಆಡಳಿತದಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದರು.

ಮುಂಬರುವ ವರ್ಷಗಳಲ್ಲಿ ದೇಶವು ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವತ್ತ ಸಾಗುತ್ತಿದೆ. ಸೇನಾ ಸಾಮಗ್ರಿಗಳು ಭಾರತದಲ್ಲಿ ಉತ್ಪಾದನೆ ಆಗುತ್ತಿವೆ. ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ, ಜನಧನ್ ಯೋಜನೆ, ವಿಶ್ವಕರ್ಮ ಯೋಜನೆ, ಬೇಟಿ ಪಡಾವೋ-ಬೇಟಿ ಬಚಾಮೋ ಸೇರಿದಂತೆ ಅನೇಕ ಯೋಜನೆಗಳು ಜನಪ್ರಿಯತೆ ಪಡೆದುಕೊಂಡಿವೆ. ಎಂದು ಹೇಳಿದರು.

ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ, ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಲಗೇರಿ, ಬೀರಪ್ಪ ಖಂಡೇಕಾರ, ವೀಣಾ ಬರದ್ವಾಡ, ರೂಪಾ ಶೆಟ್ಟಿ, ರವಿ ನಾಯಕ, ವಸಂತ ನಾಡಜೋಶಿ, ದತ್ತಮೂರ್ತಿ ಕುಲಕರ್ಣಿ, ವಸಂತ ನಾಡಜೋಶಿ, ಪ್ರವೀಣ ಪವಾರ , ರಾಮನಗೌಡ ಶೆಟ್ಟನಗೌಡರ, ಪ್ರಶಾಂತ ಹಾವಣಗಿ, ಚನ್ನು ಹೊಸಮನಿ, ಕಿರಣ ಉಪ್ಪಾರ, ಅಕ್ಕಮಹಾದೇವಿ ಹೆಗಡೆ, ಸಂಗೀತಾ ಬದ್ದಿ ಹಾಗೂ ಇತರರು ಇದ್ದರು.

ಶಿಬಿರದಲ್ಲಿ 75 ಜನ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net