ಬಸವಣ್ಣನವರು ವಿಶ್ವ ಗುರುಗಳು: ಎಸ್​. ವಿ. ಸಂಕನೂರ

10GDG06
ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಸವೇಶ್ವರರ ಜಯಂತಿ ಆಚರಿಸಲಾಯಿತು. ಎಸ್​.ವಿ. ಸಂಕನೂರು, ರಾಜು ಕುರಡಗಿ, ಎಂ.ಎಸ್​. ಕರಿಗೌಡ್ರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ವಿಶ್ವಗುರು ಬಸವೇಶ್ವರರ 919ನೇ ಬಸವ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ, ಬಸವೇಶ್ವರರು ವಿಶ್ವಗುರುಗಳು. ಅವರು ವಿಶ್ವಗುರು ಆಗಿದ್ದರಿಂದ ಇಂಗ್ಲೇಂಡಿನ ಥೇಮ್ಸ್​ ನದಿಯ ದಂಡೆಯ ಮೇಲೆ ಬಸವಣ್ಣನವರ ಮೂತಿರ್ಯನ್ನು ಸ್ಥಾಪಿಸಲಾಯಿತು. ಬಸವಣ್ಣನವರ ಆಚಾರ ವಿಚಾರಗಳನ್ನು ವಿದೇಶಿಯರು ಪಾಲಿಸುತ್ತಾಎ. ದಾಸೋಹ ಎಂದರೆ ಇಂದು ಮಠ ಮಂದಿರಗಳಲ್ಲಿ ನಡೆಯುವ ಪ್ರಸಾದ ವಿತರಣೆ ಮಾತ್ರ ಅಲ್ಲದೇ ದಾಸೋಹ ಎಂದರೆ ನಾವು ದುಡಿದಿದ್ದರಲ್ಲಿ ಸ್ವಲ್ಪನಾದರೂ ಸಮಾಜಕ್ಕೆ ಅಪಿರ್ಸಬೇಕು. ದೀನ ದಲಿತರು, ಬಡವರು ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನತೆಗೆ ನಾವು ಸ್ವಲ್ಪ ಭಾಗವನ್ನು ಹಂಚಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯ ರಾಜು ಕುರುಡಗಿ ಮಾತನಾಡಿ, 12 ನೇ ಶತಮಾನದಲ್ಲಿ ಜಾತಿ, ಜಾತಿಯ ನಡುವೆ ಸಂರ್ಷಗಳಿದ್ದವು. ಎಲ್ಲ ಜಾತಿಗಳು ಸಮಾನವಾಗಿವೆ. ದಲಿತರಿಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವ ಹಾಗೆ ಬಸವಣ್ಣನವರು ಮಾಡಿದರು. 12ನೇ ಶತಮಾನದಲ್ಲಿಯ ಶಿವಶರಣ ಶರಣೆಯರು ಕಾಯಕ ದಾಸೊಹಗಳನ್ನು ನಂಬಿ ಅವುಗಳ ಸವಿಯನ್ನು ಅನುಭವಿಸಿ ಸಾರ್ಥಕ ಬದುಕನ್ನು ಸಾಧಿಸಿ ಮನಕುಲಕ್ಕೆ ಮಾದರಿ ಆಗಿದ್ದಾರೆ. ಶರಣರು ಕಾಯಕ ದಾಸೋಹದ ಬಗ್ಗೆ ಕೇವಲ ವಚನಗಳನ್ನು ರಚಿಸದೇ ನುಡಿದಂತೆ ನಡೆದು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರು. ಅವರ ತತ್ವ ಆಚರಣೆಗಳನ್ನು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಮಾತನಾಡಿದರು.
ಜಿಲ್ಲಾ ವಕ್ತಾರ ಎಂ. ಎಂ. ಹಿರೇಮಠ ಮಾತನಾಡಿ, ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿದರು. ಕಾಯಕ ಎಂದರೆ ಕಸಬು, ಕೆಲಸ, ದುಡಿಮೆ, ವೃತ್ತಿ. ಕಾಯಕವೇ ಕೈಲಾಸ ಎಂದು ನಂಬಿ ನಾವು ಮಾಡುವ ಯಾವುದೇ ಉದ್ಯೋಗವಿದ್ದರು ಅದರಲ್ಲಿ ಪ್ರಾಮಾಣಿಕತೆ, ನಿಷ್ಠುರತೆ ಇರಬೇಕು ಎಂದರು.
ಎಂ. ಎಸ್​. ಕರೀಗೌಡ್ರ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ಭೀಮಸಿಂಗ ರಾಠೋಡ, ಕೆ. ಕೆ. ಮಳಗೌಡ್ರ, ಕೆ. ಪಿ. ಕೊಟಿಗೌಡ್ರ, ಸುಧೀರ ಕಾಟಿಗರ, ಮಂಜುನಾಥ ಶಾಂತಗೇರಿ, ಸಂತೋಷ ಅಕ್ಕಿ, ರಾಜೇಶ ಕಟ್ಟಿಮನಿ, ಸಂತೋಷ ಕಲ್ಯಾಣಿ, ವಿಶ್ವನಾಥ ಶಿರಿಗಣ್ಣವರ, ಎಸ್​.ಕೆ.ಉಮಚಗಿ, ರವಿ ಮಾನ್ವಿ, ಮಾಂತೇಶ ಬಾತಾಖಾನಿ, ಶಾಂತೆಶ ಚವಡಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net