

ಕೋಲಾರ: ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಮುಖಂಡರೇ ಹೇಳುತ್ತಿದ್ದು, ಕಾಂಗ್ರೆಸ್ ಒಂದು ಮನೆ ಮೂರು ಬಾಗಿಲು ಆಗಿದೆ. ಈ ಬಾರಿ ವಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಜನ ತೀರ್ವಾನಿಸಿದ್ದಾಗಿದೆ. ಇದನ್ನು ಯಾರೂ ತಡೆಯಲು ಆಗದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನೂ ಗೆಲ್ಲುವುದಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವುದೂ ಇಲ್ಲ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಇದರ ಜತೆಯಲ್ಲೇ ಬಿಜೆಪಿ ಅಪರೇಷನ್ ಕಮಲದ ಮೂಲಕ ಮತ್ತೆ ಅಧಿಕಾರ ಹಿಡಿಯುತ್ತದೆ ಎಂದೂ ಹೇಳಿದ್ದಾರೆ. ಡಬಲ್ ಇಂಜಿನ್ ಸರ್ಕಾರ ನಮ್ಮದು ಎಂದು ಹೇಳುತ್ತಾರೆ. ಆದರೆ ಅಭಿವೃದ್ಧಿ, ಮುಂದಿನ ಯೋಜನೆಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದೆ ಅನೈತಿಕ ವಾರ್ಗದಲ್ಲಿ ಅಧಿಕಾರ ಹಿಡಿಯುವ ಮಾತನ್ನಾಡುತ್ತಿದ್ದಾರೆ. ಹಾಗಾದರೆ ಬಿಜೆಪಿಗೆ ಗೆಲ್ಲುವ ಆತ್ಮಸ್ಥೈರ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಹರಕೆಯ ಕುರಿ: ಕೋಲಾರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಅಥವಾ ಗೆಲುವು ನಮಗೆ ಸಂಬಂಧಿಸಿದ್ದಲ್ಲ. ಅವರನ್ನು ಹರಕೆಯ ಕುರಿ ವಾಡುತ್ತಿದ್ದಾರೆ. ಅವರ ಪಕ್ಷದವರೇ ಸೋಲಿಸಲು ಸಜ್ಜಾಗಿದ್ದಾರೆ. ಮುಖ್ಯವಾಗಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ವೈ.ಎಸ್.ವಿ.ದತ್ತ ಜತೆ ಒಂದಿಬ್ಬರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಆದರೆ ಅಲ್ಲಿ ಇನ್ನೂ ಇಬ್ಬರು ಟಿಕೆಟ್‌ಗೆ ಯತ್ನಿಸಿದ್ದಾರೆ. ಜೆಡಿಎಸ್ ಕಡೂರಿನಲ್ಲಿ ಪ್ರಬಲವಾಗಿದೆ. ಆ ಜಿಲ್ಲೆಯಲ್ಲೂ ಟಿಕೆಟ್ ೋಷಣೆೆಗೆ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು. ಮಲ್ಲೇಶ್‌ಬಾಬು, ಕುರ್ಕಿ ರಾಜೇಶ್ವರಿ, ತೂಪಲ್ಲಿ ಚೌಡರೆಡ್ಡಿ, ಬಣಕನಹಳ್ಳಿ ನಟರಾಜ್, ವಕ್ಕಲೇರಿ ರಾಮು, ವಡಗೂರು ರಾಮು, ಮಲಾಂಡ್ಲಹಳ್ಳಿ ಲೋಕೇಶ್ ಇದ್ದರು.
ಬಿಜೆಪಿ ಜತೆ ಒಳ ಒಪ್ಪಂದ ಇಲ್ಲ
ಸಿದ್ದರಾಮಯ್ಯ ಬಾದಾಮಿ ಗೆಲ್ಲಲು ನಾನು ಕಾರಣ. ಅಲ್ಲಿನ ಚುನಾವಣೆಯಲ್ಲಿ ನಾನು ಹೋಂ ವರ್ಕ್ ಮಾಡಿದ್ದು ನಿಜ. ಕೋಲಾರದಲ್ಲಿ ಅನುಕೂಲ ವಾತಾವರಣವಿಲ್ಲ, ಸ್ಪರ್ಧೆ ಬೇಡ ಎಂದಿದ್ದೆ. ಈಗ ಅವರ ಮನೆ ದೇವರೂ ಅದೇ ಹೇಳಿದೆ. ಬಲವಂತಕ್ಕೆ ಬರುತ್ತಿರುವ ಅವರು ಹೈಕಮಾಡ್ ಮೇಲೆ ಭಾರ ಹಾಕುತ್ತಿದ್ದಾರೆ. ಜೆಡಿಎಸ್ 123 ಸ್ಥಾನ ಗಳಿಸುತ್ತದೆ. ಬೀದರ್‌ನಲ್ಲೂ ಕುಮಾರಸ್ವಾಮಿಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅಲ್ಲೆಲ್ಲ ಒಕ್ಕಲಿಗರೇ ಇದ್ದಾರೇನು? ನಾವೇ ಬಹುಮತ ಪಡೆಯುತ್ತೇವೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು. ಸ್ಯಾಂಟ್ರೋ ರವಿ ಪ್ರಕರಣ ಸಿಬಿಐ ತನಿಖೆ ಆಗಬೇಕು. ಇದರ ಬಗ್ಗೆ ಕಾಂಗ್ರೆಸ್‌ನವರು ಬಾಯಿ ಬಿಡುತ್ತಿಲ್ಲ. 13 ಶಾಸಕರ ಸಿಡಿ ಇದೆಯಂತೆ. ಕೆಲವರು ಅದಕ್ಕಾಗಿ ಸ್ಟೇ ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷ ಸಿಎಂ ಕುಮಾರಸ್ವಾಮಿ ಸಿಎಂ ಅಂತಾ ಹೇಳುತ್ತಿದ್ದೇವೆ. ಆದರೆ ಬಿಜೆಪಿ, ಕಾಂಗ್ರೆಸ್ಸಿಗರು ಯಾರು ಎಂದು ಹೇಳಲಿ ಎಂದು ಸವಾಲು ಹಾಕಿದರು.
2 ಸಾವಿರ ಜನ ಸೇರಲಿಲ್ಲ
ಸಿದ್ದರಾಮಯ್ಯ ಬಂದಾಗ 2 ಸಾವಿರ ಜನ ಸೇರಿಸಿಲ್ಲ, ಆರು ಶಾಸಕರು, ಒಬ್ಬ ಎಂಎಲ್ಸಿ ಸೇರಿ ನಾಯಕರು ಇಷ್ಟು ಕಡಿಮೆ ಜನ ಸೇರಿಸುತ್ತಾರೆ ಎಂದರೆ ಆ ಪಕ್ಷ ವರ್ಚಸ್ಸು ಕಳೆದುಕೊಂಡಿದೆ ಎಂದೇ ಅರ್ಥ. ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಬದಲಾವಣೆ ಇಲ್ಲ, ಗೆಲ್ಲುವುದು ಖಚಿತ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಮಾಜಿ ಸ್ಪೀಕರ್ ರಮೇಶ್ ಕುವಾರ್ ಬಣ ಮುಸ್ಲಿಮರ ರಕ್ಷಣೆ ವಾಡುವುದು ಕನಸಿನ ವಾತೇ ಸರಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಅಮುಲ್-ನಂದಿನಿ ವಿಲೀನ ಸಲ್ಲ
ಅವಿಭಜಿತ ಕೋಲಾರ ಜಿಲ್ಲೆಗೆ ಮತ್ತು ನಮ್ಮ ಕುಟುಂಬಕ್ಕೆ ನೆಂಟಸ್ತನವಿದೆ. ಕುಮಾರಸ್ವಾಮಿಯವರೂ ಸಹ ಒಂದು ಸಂದರ್ಭದಲ್ಲಿ ಇಲ್ಲಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನು ಮಂಡ್ಯಗೆ 10 ಬಾರಿ ಅಮಿತಾ ಷಾ ಬಂದರೂ ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವುದಿಲ್ಲ. ಅಮುಲ್ ಜತೆ ನಂದಿನಿ ಉತ್ಪನ್ನ ವಿಲೀನ ಮಾಡುವ ಬಗ್ಗೆ ಪ್ರಸ್ತಾಪಿಸಿ ಜನರ ವಿರೋಧ ಕಟ್ಟಿಕೊಂಡಿದ್ದಾರೆ. ಇಷ್ಟಕ್ಕೂ ನಂದಿನಿ ಉತ್ಪನ್ನ ಯಾರಪ್ಪನ ಆಸ್ತಿ? ಅದನ್ನು ನಮ್ಮ ರೈತರು ಶಕ್ತಿಯಾಗಿ ಬೆಳೆಸಿದ್ದಾರೆ. ಕೆಎಂಎಫ್ ಅಧ್ಯಕ್ಷರ ಸ್ಥಾನ ಕ್ಯಾಬಿನೆಟ್ ಸ್ಥಾನವಾನಕ್ಕಿಂತ ಹೆಚ್ಚಾಗಿದ್ದು, ಮಿಲ್ಕ್, ಸಿಲ್ಕ್‌ಗೆ ಕೋಲಾರ ಪ್ರಸಿದ್ಧಿ ಪಡೆದಿದೆ. ಹೀಗಾಗಿ ರೈತರ ಭವಿಷ್ಯದ ಜತೆ ಯಾರೂ ಆಟವಾಡಬಾರದು ಎಂದು
ಪ್ರಜ್ವಲ್ ರೇವಣ್ಣ ಹೇಳಿದರು.
ಕೋಲಾರ ಜೆಡಿಎಸ್‌ನ ಭದ್ರಕೋಟೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾತನಾಡಿ, ಕೋಲಾರದಲ್ಲಿ ಮುಸ್ಲಿಮರ ಸಾಮೂಹಿಕ ವಿವಾಹ ಉದ್ಘಾಟನೆಗೆ ಬಂದಿರುವೆ. ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಕಳೆದ ಬಾರಿ ಶ್ರೀನಿವಾಸಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನವರ ವಾತು ಕೇಳಿ ಹಣ ಪಡೆದು ಬಿಜೆಪಿಗೆ ಮತ ಹಾಕಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿದರು. ಕೋಲಾರ ಕಾಂಗ್ರೆಸ್ ಮುಕ್ತವಾಗಲಿದೆ. ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ ನಿಲ್ಲುತ್ತಿದ್ದು, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ, ಬಿಜೆಪಿಯ ಮುನಿಸ್ವಾಮಿ ಅವರನ್ನು ಗೆಲ್ಲಿಸಿದವರೇ ಇವತ್ತು ಕಾಂಗ್ರೆಸ್‌ಗೆ ಮತ ಕೇಳುತ್ತಿದ್ದಾರೆ ಎಂದರು.