

ಮೈಸೂರು: ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಮೈತ್ರಿ ಕುರಿತು ಬಿಜೆಪಿ ಜೆಡಿಎಸ್ ಜತೆಗೆ ಮಾತನಾಡಲಿಲ್ಲ, ಮೈತ್ರಿಯನ್ನೂ ಮಾಡಿಕೊಂಡಿಲ್ಲ. ಚುನಾವಣೆಯಲ್ಲಿ ನಮ್ಮ ತಂತ್ರಗಾರಿಕೆ ಫಲಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಪರವಾಗಿ ಜೆಡಿಎಸ್‌ನವರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಮೇಯರ್ ಅಭ್ಯರ್ಥಿ ಶಿವಕುಮಾರ್ ಪರವಾಗಿ ಬೇರೆ ಪಕ್ಷದವರು ಮತ ಚಲಾಯಿಸುತ್ತೇವೆ ಎಂದು ಮುಂದೆ ಬಂದಾಗ ಬೇಡ ಅನ್ನಲು ಆಗೋದಿಲ್ಲ. ಈ ಕಾರಣಕ್ಕೆ ಜೆಡಿಎಸ್‌ನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಉಪ ಮೇಯರ್ ಸ್ಥಾನ ಸಹ ಬಿಜೆಪಿಗೆ ದೊರೆಯಿತು. ಇದರಲ್ಲಿ ಯಾವುದೇ ಪಕ್ಷದ ಕೈವಾಡ ಇಲ್ಲ ಎಂದರು.