

ಸೊರಬ: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದು ಮೌನವಹಿಸಿರುವುದು ಅಕ್ಷಮ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಆರೋಪಿಸಿದರು.
ಬುಧವಾರ ಸಂಜೆ ತಾಲೂಕಿನ ಗುಡವಿಬಳಿ ವರದಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ನಂತರ ಸುದ್ದಿಗಾರರ ಜತೆ ಮಾತನಾಡಿದರು.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಷಯದಲ್ಲಿ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಆದರೆ ಅವರ ಅಽಕಾರದ ಅವಽಯಲ್ಲಿ ನೀರು ಹರಿಸಿಲ್ಲವೇ ಎಂದು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತದೆ. ಈ ಬಗ್ಗೆ ಕಾವೇರಿ ನಿರ್ವಹಣಾ ಪ್ರಾಽಕಾರ ಶಿಫಾರಸು ಮಾಡಿದೆ. ಯಾವುದೇ ಸರ್ಕಾರ ನೀರು ಹರಿಸುವ ವಿಚಾರವಾಗಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತಬೇಕು. ಆದರೆ ವಿಪಕ್ಷಗಳು ನೀರಿನ ವಿಷಯದಲ್ಲಿ ರಾಜಕೀಯ ಮಾಡಲು ಮುಂದಾಗುತ್ತಿವೆ ಎಂದು ಟೀಕಿಸಿದರು.
ತಾಲೂಕಿನಲ್ಲಿ ಗುಡವಿ ಗ್ರಾಮದ ಸಮೀಪದ ಸೇತುವೆ ನಿರ್ಮಾಣಕ್ಕೆ ಮೊದಲ ಬಾರಿ ಶಾಸಕರಾಗಿದ್ದ ಅವಽಯಲ್ಲೇ ಮಂಜೂರಾತಿ ಪಡೆದು ಅನುಮೋದನೆ ಪಡೆಯಲಾಗಿತ್ತು. ಸೇತುವೆ ನಿರ್ಮಾಣ ಪೂರ್ಣಗೊಂಡರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದ್ದು ಇದರಿಂದ ಪ್ರವಾಸೋದ್ಯಮವೂ ಬೆಳವಣಿಗೆಯಾಗಲಿದೆ. ಫೆಬ್ರವರಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದರು.
ತಾಪಂ ಇಒ ಡಾ.ಎನ್.ಆರ್.ಪ್ರದೀಪ್‌ಕುಮಾರ್, ಇಂಜಿನಿಯರ್ ಯಶೋದರ್, ರಾಮಪ್ಪ, ಗಣಪತಿ ನಾಯಕ್, ಕಿರಣ್, ಪರಶುರಾಮ್, ಮುಖಂಡರಾದ ತಬಲಿ ಬಂಗಾರಪ್ಪ, ಎಚ್.ಗಣಪತಿ, ಶಿವಲಿಂಗೇಗೌಡ, ಸದಾನಂದ ಗೌಡ, ಎಂ.ಡಿ.ಶೇಖರ್, ಕಲ್ಲಂಬಿ ಹಿರಿಯಣ್ಣ, ಮಂಜಪ್ಪ, ಸುನೀಲ ಗೌಡ, ಜಯಶೀಲ ಗೌಡ, ಸುರೇಶ್ ಬಿಳವಾಣಿ, ಮರ‍್ಯಪ್ಪ ಬೆನ್ನೂರು, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಪ್ರಕಾಶ್ ಹಳೇಸೊರಬ, ರವಿ ಬರಗಿ ಇತರರಿದ್ದರು.
161 ತಾಲೂಕುಗಳು ತೀವ್ರ ಬರ
ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು ಸರ್ಕಾರ ಸಮರ್ಪಕವಾಗಿ ಬರ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ತಿಳಿಸಿದ ಸಚಿವ ಮಧು ಬಂಗಾರಪ್ಪ, 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇನ್ನೂ 32 ತಾಲೂಕುಗಳನ್ನು ಪಟ್ಟಿಗೆ ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ. ಹವಾಮಾನ ವೈಪರೀತ್ಯಗಳಿಂದ ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸುತ್ತವೆ. ಇಂತಹ ಸಾಮಾನ್ಯ ಜ್ಞಾನ ಇಲ್ಲದ ಬಿಜೆಪಿಯವರು ಇಲ್ಲ ಸಲ್ಲದ ಆರೋಪದಲ್ಲಿ ತೊಡಗಿದ್ದಾರೆ ಎಂದರು.