ಕಲಬುರಗಿ ಡಿಸಿ ನಿಂದನೆ : ವಿಚಾರಣೆಗೆ ಹಾಜರಾದ ರವಿಕುಮಾರ

IMG-20250602-WA0013
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿರುವಂತಿದೆ ಎಂದು ಹೇಳಿಕೆ ನೀಡಿದ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ  ಎನ್.ರವಿಕುಮಾರ ಅವರು ತನಿಖಾಧಿಕಾರಿಯಾಗಿರುವ ಕಲಬುರಗಿ ದಕ್ಷಿಣ ಎಸಿಪಿ  ಮುಂದೆ ಇಂದು ವಿಚಾರಣೆಗೆ ಹಾಜರಾದರು.

ಡಿಸಿ ಕಚೇರಿ ಆವರಣದಲ್ಲಿ ಕಚೇರಿಗೆ  ಪಕ್ಷದ ಮುಖಂಡರ ಜತೆಗೆ  ದಕ್ಷಿಣ ವಿಭಾಗದ ಎಸಿಪಿ ಕಚೇರಿಗೆ ಆಗಮಿಸಿದ ಎನ್.ರವಿಕುಮಾರ್ ವಿಚಾರಣೆಗೆ ಹಾಜರಾದರು.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಗ್ಗೆಮೇ 24 ರಂದು ಕಲಬುರಗಿ ಚಲೋ ಪ್ರತಿಭಟನೆ ಕಾರ್ಯಕ್ರಮದಲ್ಲಿ ರವಿಕುಮಾರ್ ಮಾತನಾಡುವ ವೇಳೆಜಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ , ಪೊಲೀಸ್ ಅಧಿಕಾರಿಗಳ ಬಗ್ಗೆ ನಿಂದನೆಯ  ಹೇಳಿಕೆ ಹಿನ್ನಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ದೂರು ದಾಖಲಾಗಿತ್ತು.

ಒಂದುವರೆ ಗಂಟೆಯಿಂದ ತನಿಖಾಧಿಕಾರಿ ಪ್ರಶ್ನಾವಳಿ ಮೂಲಕ ವಿಚಾರಣೆ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೀಗಿ ಪೋಲಿಸ್ ಬಂದೋಬಸ್ತ್ ನಗರದಲ್ಲಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net