ಭಿಕ್ಷುಕರಿಗಿಂತ ಕಡೆಯಾದ ಶಾಸಕರು !

SG_1
Published on

ತುಮಕೂರು: ಇದು ಭಿಕ್ಷುಕರ ಸರ್ಕಾರ. ಅಭಿವೃದ್ಧಿ ಯೋಜನೆಗಳಿಗೆ ಕಾಲು ಹಿಡ್ಕೊಂಡ್ರು ಒಂದು ಪೈಸೆ ಕೊಡೊಲ್ಲ. ಭಿಕ್ಷುಕರಿಗಿಂತ ಕಡೆ ಆಗಿದ್ದೇವೆ ಶಾಸಕರು ಎಂದು ಬಿಜೆಪಿ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಮುಂದೆ ಭಿಕ್ಷೆ ಬೇಡಿದರಾದರು ಭಕ್ತರು ಕರುಣೆ ತೋರುತ್ತಾರೆ. ಆದರೆ, ಈ ಸರ್ಕಾರದ ಬಳಿ ಭಿಕ್ಷೆ ಬೇಡಿ, ಕೈಕಾಲು ಹಿಡ್ಕೊಂಡರು ಐದು ಪೈಸೆ ನೀಡೋಲ್ಲ. ಕಪ್ಪುಬಾವುಟ ಹಾರಿಸುವುದಾಗಿ, ಪ್ರತಿಭಟಿಸುವುದಾಗಿ ಹೇಳಿದರು ಕೊಡಲಿಲ್ಲ ಎಂದರು.

ವರ್ಷಕ್ಕೆ ಕೊಡಬೇಕಾದ ಶಾಸಕರ ಪ್ರದೇಶಾಶಭಿವೃದ್ಧಿ ಅನುದಾನದ 2 ಕೋಟಿಯಲ್ಲಿ ಇನ್ನೂ 50 ಲಕ್ಷ ರೂ., ಬರಬೇಕಿದೆ. ಮಧುಗಿರಿ, ಕುಣಿಗಲ್​ ಶಾಸಕರಿಗೆ ಶಕ್ತಿ ಇದೆ ಅನುದಾನ ತರುತ್ತಾರೆ. ಎಲ್ಲಾ ಶಾಸಕರನ್ನು ಸಮಾನತೆಯಿಂದ ನೋಡದಿದ್ದರು ವಿರೋಧಪಕ್ಷದ ಶಾಸಕರಿಗೆ ಕನಿಷ್ಠ ಅರ್ಧಭಾಗದಷ್ಟಾದರು ಅನುದಾನ ನೀಡಬೇಕು. ಆದರೆ, ಯಾವುದೇ ಯೋಜನೆಗಳಿಗೆ ಒಂದು ಪೈಸೆ ಅನುದಾನವನ್ನು ನೀಡಿಲ್ಲ ಎಂದು ವಾಗ್ಧಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net