ಲಿಂಕ್​ ಕೆನಾಲ್​ ಬೆಂಬಲಿಸಿ ಜನರಿಗೆ ವಿಷ ಹಾಕಿರುವ ಪರಂ

SureshGowda_PC_01
Published on

ತುಮಕೂರು: ಸಿಎಂ ಮಾಡುತ್ತೇನೆಂದು ಹೇಳಿ ಸಿದ್ದರಾಮಯ್ಯ ಅವರು ಪರಮೇಶ್ವರ್​ ಮೂಗಿಗೆ ತುಪ್ಪ ಸವರಿದ್ದಾರೆ. ಹಾಗಾಗಿ ಅವರು ಜಿಲ್ಲೆಯ ಹಿತಾಸಕ್ತಿ ಮರೆತಿದ್ದಾರೆ. ಜಿಲ್ಲೆಯ ಜನರಿಗೆ ಮರಣಶಾಸನವಾಗಿರುವ ಹೇಮಾವತಿ ಲಿಂಕ್​ ಕೆನಾಲ್​ ಯೋಜನೆಯನ್ನು ಗಣರಾಜ್ಯೋತ್ಸವ ಭಾಷಣದಲ್ಲಿ ಸಚಿವ ಪರಮೇಶ್ವರ್​ ಬೆಂಬಲಿಸುವ ಮೂಲಕ ಜನರಿಗೆ ವಿಷಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಬಿ.ಸುರೇಶಗೌಡ ಗಂಭೀರ ಆರೋಪ ಮಾಡಿದರು.

ಸದನದಲ್ಲಿ ಮಾತನಾಡುವ ಧಮ್​ ಅವರಿಗಿಲ್ಲ. ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್​ ಕುಬೇರ ಎಂದು ಟೀಕಿಸುವ ರಾಜಣ್ಣ, ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಲಿಂಕ್​ ಕೆನಾಲ್​ ವಿರೋಧಿಸಲಿ ನೋಡೋಣಾ? ಮುಂದಿನ ಸಂಪುಟ ಸಭೆಯಲ್ಲಿ ಲಿಂಕ್​ ಕೆನಾಲ್​ ರದ್ದುಪಡಿಸುವಂತೆ ಒತ್ತಾಯಿಸದಿದ್ದರೆ ಎನ್​ಡಿಎ ಶಾಸಕರು ಉಗ್ರ ಹೋರಾಟ ನಡೆಸಲಿದ್ದೇವೆ. ಇದಕ್ಕೆ ಗುಬ್ಬಿ ಶಾಸಕ ಶ್ರೀನಿವಾಸ್​ ಬೆಂಬಲವು ನಮಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net