ಕರಾವಳಿಗೆ ಅನುದಾನ ನೀಡದಿದ್ದರೆ ಸಿಎಂ ಮನೆ ಮುಂದೆ ಧರಣಿ

udp-16-bjp
Published on

ಉಡುಪಿ: ಕರಾವಳಿ 3 ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಕಳೆದ 1.5 ವರ್ಷದಿಂದ 1 ರೂ. ಅನುದಾನವನ್ನೂ ನೀಡಿಲ್ಲ. ಜಿಲ್ಲಾಡಳಿತ ಅಸಹಕಾರ, ವಿನಾಕಾರಣ ಶಾಸಕರು, ಕಾರ್ಯಕರ್ತರನ್ನು ಟಾರ್ಗೆಟ್​ ಮಾಡುವ ಪ್ರವೃತ್ತಿ ಮುಂದುವರಿದಿದ್ದು, 10 ದಿನದ ಒಳಗಾಗಿ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಕರಾವಳಿ ಜಿಲ್ಲೆಯ ರ್ನಿಲಕ್ಷ ಖಂಡಿಸಿ 3 ಜಿಲ್ಲೆಯ ಶಾಸಕರು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್​ ಕುಮಾರ್​ ಹೇಳಿದರು.

ಉಡುಪಿ ಜಿಲ್ಲೆಯ ಶಾಸಕರು ಮತ್ತು ಸಂಸದರ ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಸಿಎಂ ಉಡುಪಿಗೆ ಬಂದು ಕೆಡಿಪಿ ಸಭೆ ನಡೆಸಿದ್ದು, ಸಭೆಯ ರ್ನಿಣಯವನ್ನು ಈವರೆಗೆ ಅನುಷ್ಠಾನಗೊಳಿಸಿಲ್ಲ. ಕಾಲು ಸಂಕ ನಿರ್ಮಾಣಕ್ಕೆ 50 ಕೋಟಿ ರೂ. ಘೊಷಿಸಿದ್ದರು. ಬೆಳೆ ಹಾನಿಗೆ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ. ಈ ವರ್ಷ ಮಳೆಯಿಂದ 240 ಕೋಟಿ ರೂ. ನಷ್ಟವಾಗಿದೆ ಎಂಬುದಾಗಿ ಜಿಲ್ಲಾಡಳಿತ ವರದಿ ನೀಡಿದೆ. ಈವರೆಗೆ 1 ಪೈಸೆನೂ ಬಿಡುಗಡೆಯಾಗಿಲ್ಲ. ಸರ್ಕಾರ ದಿವಾಳಿಯಾಗಿದೆಯೇ ಅಥವಾ ಕರಾವಳಿ ಜಿಲ್ಲೆಯನ್ನು ರ್ನಿಲಸುತ್ತಿದೆಯೇ ಎಂಬುದು ತಿಳಿಯುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ತೇಪೆ ಕಾರ್ಯಕ್ಕೆ ಹಣ ಬಿಡುಗಡೆ ಮಾಡಬೇಕು. ಇದಕ್ಕೆ ಸಿಎಂ ಉತ್ತರ ನೀಡದಿದ್ದರೆ 2 ಜಿಲ್ಲೆಗಳಲ್ಲಿ ಜನಾಂದೋಲನ ನಡೆಸಲಾಗುವುದು ಎಂದರು.

11 ಲಕ್ಷ ಬಿಪಿಎಲ್​ ರದ್ದು!
ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಬೇಕಾಬಿಟ್ಟಿ ದರ ಏರಿಕೆ ಮಾಡುತ್ತಿರುವ ಸರ್ಕಾರ, ಪ್ರಸ್ತುತ ಬಿಪಿಎಲ್​ ಕಾರ್ಡ್​ಗಳನ್ನು ಬಡವರಿಂದ ಕಿತ್ತುಕೊಳ್ಳಲು ಹೊರಟಿದೆ. ರಾಜ್ಯದಲ್ಲಿ 11 ಲಕ್ಷ ಬಿಪಿಎಲ್​ ಕಾರ್ಡ್​ ಹಾಗೂ ಜಿಲ್ಲೆಯಲ್ಲಿ 40 ಸಾವಿರ ಕಾರ್ಡ್​ ರದ್ದು ಪಡಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನಸಭಾವಾರು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರ ಕೂಡಲೇ ಸುತ್ತೋಲೆ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು.

ಏಕಪಯ ತೀರ್ಮಾನ ವಿರುದ್ಧ ಡಿಜಿಪಿ ಭೇಟಿ
ಜನಪ್ರತಿನಿಧಿಗಳ ಬದಲಾಗಿ ಕಾಂಗ್ರೆಸ್​ ಕಾರ್ಯಕರ್ತರು ಅಧಿಕಾರ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನೆಪದಲ್ಲಿ ಪ್ರತಿಭಟನೆ ಮಾಡುವವರ ಮೇಲೆಯೇ ಕೇಸ್​ ದಾಖಲಿಸುವ ಪ್ರವೃತ್ತಿ ಪ್ರಜಾಪ್ರಭುತ್ವದಲ್ಲಿ ಶೋಭೆತರುವುದಿಲ್ಲ. ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಯಶ್​ಪಾಲ್​ ಸುವಣ್​ ಹಾಗೂ ಕಾರ್ಯಕರ್ತರ ಮೇಲೆ ಹಾಕಿರುವ ಮೊಕದ್ದಮೆ ವಾಪಾಸು ಪಡೆಯಬೇಕು. ಪೊಲೀಸರ ಏಕಪಯ ತೀರ್ಮಾನದ ವಿರುದ್ಧ ರಾಜ್ಯ ಪೊಲೀಸ್​ ಮುಖ್ಯಸ್ಥರನ್ನು ಭೇಟಿಯಾಗಿ ದೂರು ಸಲ್ಲಿಸಲಾಗುವುದು ಎಂದು ಆಗ್ರಹಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್​ ಸುವರ್ಣ, ಕುಂದಾಪುರ ಶಾಸಕ ಕಿರಣ್​ ಕೊಡ್ಗಿ ಉಪಸ್ಥಿತರಿದ್ದರು.

ಬಿಸಿ ರೋಡ್​ನಲ್ಲಿ ಪುಂಡರ ಅತಿರೇಕದ ವರ್ತನೆಗೆ ಉತ್ತರವಾಗಿ ಬಿಸಿ ರೋಡ್​ ಚಲೋ ಹಮ್ಮಿಕೊಳ್ಳಲಾಗಿದೆ. ಮುಸ್ಲಿಂ ಸಮಾಜದ ಹಿರಿಯರು ಮತ್ತು ಮುಖಂಡರು ತಮ್ಮ ಯುವಕರನ್ನು ಹದ್ದುಬಸ್ತಿನಲ್ಲಿಡಬೇಕು. ಹಿಂದೂ ಸಮಾಜ ಹತ್ತಾರು ಸವಾಲುಗಳನ್ನು ಎದುರಿಸುವ ಶಕ್ತಿ ಹೊಂದಿದೆ. ರಾಜ್ಯದ ಪ್ರತಿ ಗಲಭೆಯಲ್ಲಿ ಪಿಎ್​ಐ ಕೈವಾಡವಿದೆ. ಕೇರಳದ ನಂಟಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ತಯಾರಿಲ್ಲ. ಸರ್ಕಾರ ಓಲೈಕೆ ನೀತಿ ಅನುಸರಿಸುತ್ತಿದೆ.ಸುನೀಲ್​ ಕುಮಾರ್​, ಶಾಸಕ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗೆ ಬಳಸಿದೆ ಎಂಬುದನ್ನು ಬಿಜೆಪಿ ವರ್ಷದಿಂದ ಹೇಳುತ್ತಿದೆ. ಆದರೆ ಇದನ್ನು ರಾಜ್ಯ ಸರ್ಕಾರ ಒಪ್ಪಿರಲ್ಲ. ನಿನ್ನೆ ಮುಖ್ಯಮಂತ್ರಿಗಳೇ ಸ್ವತ@ ಒಪ್ಪಿಕೊಂಡಿದ್ದಾರೆ. ಇದು ಅನಿವಾರ್ಯವಾಗಿದೆ. ಹೀಗಾಗಿ ಕೂಡಲೇ 24,500 ಕೋಟಿ ರೂ. ಇಲಾಖೆಗೆ ಮರುವರ್ಗಾಯಿಸಬೇಕು. ಯೋಜನೆಗಳಿಗೆ ಅನುದಾನ ಕೊಡಬೇಕು.ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net