

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಸೋಮವಾರ ಚಾಲನೆ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ವಸತಿ ಸಂಕೀರ್ಣಗಳ ದುರಸ್ತಿ ಮತ್ತು ಮೂಲ ಸೌಕರ್ಯ ಒದಗಿಸುವ ಕಾಮಗಾರಿಗೆ ಮೇಯರ್ ಶಿವಕುಮಾರ್, ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಪಾಲಿಕೆ ಸದಸ್ಯರಾದ ರಮೇಶ್, ಎಸ್.ಬಿ.ಎಂ.ಮಂಜು, ಭಾಗ್ಯ ಮಾದೇಶ್, ರಮಣಿ ಹಾಗೂ ಬಿ.ವಿ.ರವೀಂದ್ರ ಸಮ್ಮುಖದಲ್ಲಿ ಚಾಲನೆ ನೀಡಿದರು.
ನರ್ಮ್ ಯೋಜನೆಯ ಅನುದಾನ 4.05 ಕೋಟಿ ರೂ.ವೆಚ್ಚದಲ್ಲಿ ಬಿ.ಎಂ.ಶ್ರೀ ನಗರದ ನರ್ಮ್ ಮನೆಗಳ ಸಂಕೀರ್ಣ ಕಟ್ಟಡ, ಗೋಕುಲಂ 2ನೇ ಹಂತದ ನಂದಗೋಕುಲ ನರ್ಮ್ ಮನೆಗಳ ಸಂಕೀರ್ಣ ಕಟ್ಟಡ, ವಿ.ವಿ.ಮೊಹಲ್ಲಾ 16ನೇ ಕ್ರಾಸ್‌ನ ಪಿ.ಕೆ.ಕಾಲನಿ ನರ್ಮ್ ಮನೆಗಳ ಸಂಕೀರ್ಣ ಕಟ್ಟಡ, ಮೇದರ ಬ್ಲಾಕ್ ನರ್ಮ್ ಮನೆಗಳ ಸಂಕೀರ್ಣ ಕಟ್ಟಡ ಹಾಗೂ ಹಳೇ ಆರ್‌ಎಂಸಿ ಹಿಂಭಾಗದ ರಾಜರಾಜೇಶ್ವರಿನಗರದ ನರ್ಮ್ ಮನೆಗಳ ಸಂಕೀರ್ಣ ಕಟ್ಟಡಗಳನ್ನು ದುರಸ್ತಿಗೊಳಿಸಿ, ಅಗತ್ಯ ಮೂಲಸೌಕರ್ಯ ಒದಗಿಸುವ ಕಾಮಗಾರಿ ಇದಾಗಿದೆ.
ಬಿ.ಎಂ.ಶ್ರೀ ನಗರದ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ದೇವರಾಜು, ದಿನೇಶ್‌ಗೌಡ, ಮುಖಂಡರಾದ ನರಸಿಂಹಮೂರ್ತಿ, ರವಿ ಕೆಂಪಣ್ಣ, ಮಧು, ರವೀಂದ್ರ, ಪುಟ್ಟ, ಕೆಂಪಣ್ಣ ರವಿ, ಯೋಗೇಶ್, ರಮೇಶ್, ದಾಸು, ಶ್ರೀಕಾಂತ ಇದ್ದರು.
ಗೋಕುಲಂ ಕಾರ್ಯಕ್ರಮದಲ್ಲಿ ಮುಖಂಡರಾದ ಅಶೋಕ್, ಜಯಣ್ಣ, ಬಸವರಾಜು, ಪ್ರಕಾಶ್, ಹನುಮಂತು, ನಾಗ, ಸುಬ್ರಮಣಿ, ಚಂದ್ರಣ್ಣ, ಪ್ರಸನ್ನ, ಕೃಷ್ಣಪ್ಪ, ಕರಿಗೌಡ, ವಿಶ್ವನಾಥ, ಪ್ರಭು, ಕಿರಣ್ ಇದ್ದರು. ಮೇದರ್ ಬ್ಲಾಕ್ ಕಾರ್ಯಕ್ರಮದಲ್ಲಿ ಷಣ್ಮುಗಂ, ರೂಪಾ, ವಿಶ್ವನಾಥ, ಶಿಂಧೆ, ಶಿವಕೀರ್ತಿ, ಶ್ರೀನಿವಾಸ್ ಸೀನಿ, ಪ್ರಕಾಶ್, ಶ್ರೀನಿವಾಸ್ ಇದ್ದರು. ರಾಜರಾಜೇಶ್ವರಿ ಕಾಲನಿ ಕಾರ್ಯಕ್ರಮದಲ್ಲಿ ಮುಖಂಡರಾದ ವಿಜಿ, ಹೇಮ, ತಬ್ರೇಜ್, ಗಣೇಶ್, ಶಶಿ, ವಿಠಲ್, ಮುಕ್ರಂ, ರಾಜೇಂದ್ರ, ಜಾರ್ಜ್ ಇದ್ದರು.