

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಚಾಲನೆ ನೀಡಿದರು. ಶಾಸಕರಿಗೆ ಪಾಲಿಕೆ ಸದಸ್ಯರಾದ ವೇದಾವತಿ, ನಮ್ರತಾ ರಮೇಶ್ ಹಾಗೂ ಉಷಾ ಕುಮಾರ್ ಸಾಥ್ ನೀಡಿದರು.
10 ಲಕ್ಷ ರೂ. ವಿಶೇಷ ಅನುದಾನದಲ್ಲಿ ಬೋಗಾದಿ ರಸ್ತೆಯ ಕುಕ್ಕರಹಳ್ಳಿ ಮಡಿವಾಳ ಮಾಚಿದೇವರ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಚಾಮರಾಜ ಕ್ಷೇತ್ರದ ಉಪಾಧ್ಯಕ್ಷ ಶಿವಕುಮಾರ್, ಮಡಿವಾಳರ ಸಂಘದ ಮುಖಂಡರಾದ ಆನಂದ್, ಚೌಡಯ್ಯ, ಕುಮಾರ್, ನಾಗೇಶ್, ರವಿಕುಮಾರ್, ಗೋಪಾಲ್, ಮಮತಾ, ರಘು, ಸವಿತಾ, ಲತಾ, ಮಲ್ಲಿಕಾರ್ಜುನ್, ಶಂಕರ್ ಇದ್ದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಡುವಾರಹಳ್ಳಿಯ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಶ್ರೀರಾಮ ಮಂದಿರ ಕಟ್ಟಡವನ್ನು ಉದ್ಘಾಟಿಸಿದರು. ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಚಿಕ್ಕವೆಂಕಟು, ವಾರ್ಡ್ ಅಧ್ಯಕ್ಷ ಮಂಜು, ಮುಖಂಡರಾದ ಕೇಬಲ್ ಶಿವು, ಸಿ.ಡಿ. ಕುಮಾರ್, ಬಸವರಾಜು, ಸ್ವಾಮಿ, ಗೋಪಾಲ್, ವೇಣು, ಛಾಯಾ, ಉಮಾ, ಯಜಮಾನ ರಾಮಣ್ಣ, ವೆಂಕಟ್ ಗಿರಿ, ಪೈಲ್ವಾನ್ ಶಿವು ಇದ್ದರು.
ಕುಂಬಾರಕೊಪ್ಪಲು ರಾಮಮಂದಿರದ ಮುಂಭಾಗದಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕುಂಬಾರಕೊಪ್ಪಲು ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಚಾಮರಾಜ ಉಪಾಧ್ಯಕ್ಷ ಕುಮಾರ್ ಗೌಡ, ವಾರ್ಡ್ ಅಧ್ಯಕ್ಷ ನರಸಿಂಹ, ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್, ಮುಖಂಡರಾದ ಅಭಿ, ಚೌಡಪ್ಪ, ಮಹಾದೇವ, ವೆಂಕಟೇಶ್ ಇತರರಿದ್ದರು.