ಸಿಎಂ ಜತೆ ಬಿಜೆಪಿ ಶಾಸಕ ಗಹನ ಚರ್ಚೆ!

Siddaramaiah
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಕಾಂಗ್ರೆಸ್ ಕದ ತಟ್ಟುತ್ತಿರುವ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗಹನ ಚರ್ಚೆ ನಡೆಸಿದ್ದಾರೆ.

ತಮ್ಮ ಆಪ್ತರನ್ನು ಬಿಜೆಪಿಗೆ ಕಳಿಸಿಕೊಟ್ಟು ತಾವು ಪಕ್ಷಾಂತರ ಮಾಡುವ ಸುಳಿವು ನೀಡಿದ್ದ ಸೋಮಶೇಖರ್ ಸೂಕ್ತ ಕಾಲಕ್ಕೆ ಕಾಯುತ್ತಿದ್ದ ಸಂದರ್ಭದಲ್ಲಿಯೇ ಬಿಜೆಪಿ- ಜೆಡಿಎಸ್ ಮೈತ್ರಿ ಅವರ ಪಕ್ಷಾಂತರ ತೀರ್ಮಾನವನ್ನು ಯೋಚಿಸುವಂತೆ ಮಾಡಿದೆ. ಹೀಗಾಗಿ ಸೋಮಶೇಖರ್- ಸಿಎಂ ಭೇಟಿ ಮಹತ್ವ ಪಡೆದುಕೊಂಡಿದೆ.

ಬಿಬಿಎಂಪಿ ಚುನಾವಣೆ ಕಾರಣಕ್ಕೆ ತಮ್ಮ ಆಪ್ತ ಮುಖಂಡರನ್ನು ಸೋಮಶೇಖರ್ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಲು ಹಸಿರು ನಿಶಾನೆ ತೋರಿಸಿದ್ದರು. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅವರೆಲ್ಲರ ಸೇರ್ಪಡೆಯಾಗಿತ್ತು. ಸೇರ್ಪಡೆ ಕಾರ್ಯಕ್ರಮದಲ್ಲೂ ಕೂಡ ಸೋಮಶೇಖರ್ ಶೀಘ್ರವೇ ನಮ್ಮನ್ನು ಸೇರಿಕೊಳ್ಳಲಿ ಎಂದು ಅವರ ಆಪ್ತರು ಹೇಳಿದ್ದರು.

ತಿಂಗಳ ಹಿಂದಷ್ಟೇ ಸೋಮಶೇಖರ್ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿದ್ದ ಅವರು ತಮ್ಮ ಕ್ಷೇತ್ರದ ಕುರಿತು ಸಮಸ್ಯೆ ನಿವಾರಣೆಗೆ ಭೇಟಿಯಾಗಿದ್ದೆ ಎಂದಿದ್ದರು. ಈ ನಡುವೆ ಬಿಜೆಪಿ ಮುಖಂಡರು ಮಾತುಕತೆ ನಡೆಸಿ ಆತುರದ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದರು.

ಇನ್ನೊಂದು ಭಾಗದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಶಾಸಕರಾಗಿರುವ ಮುನಿರತ್ನ ಅವರು ಬಿಜೆಪಿಯ ಚಟುವಟಿಕೆಯಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net