ಶ್ರೀ ರಾಮನ ತೊಡೆ ಏರಿ ಹೂಮಾಲೆ ಹಾಕಿದ್ದಕ್ಕೆ ಕ್ಷಮೆಯಾಚಿಸಿದ ಬಿಜೆಪಿ ಶಾಸಕ

bjp mla
Published on

ಬಸವಕಲ್ಯಾಣ: ಗುರುವಾರ ಬಸವಕಲ್ಯಾಣದಲ್ಲಿ ಶ್ರೀರಾಮನವಮಿ ಪ್ರಯುಕ್ತ ನಡೆದ ಶೋಭಯಾತ್ರೆ ವೇಳೆ ಬಿಜೆಪಿ ಶಾಸಕ ಶರಣು ಸಲಗಾರ್​ ಶ್ರೀರಾಮನ ತೊಡೆ ಏರುವ ಮೂಲಕ ಅಪಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇನ್ನು ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಶರಣು ಸಲಗಾರ್​ ನಾನು ಒಬ್ಬ ಅಪ್ಪಟ ರಾಮ ಭಕ್ತನಾಗಿದ್ದು, ಹಿಂದೂ ಕಾರ್ಯಕರ್ತನಾಗಿದ್ದೇನೆ. ಶ್ರೀರಾಮನ ಮೇಲಿನ ಅತಿಯಾದ ಭಕ್ತಿ ಹಾಗೂ ಪ್ರೀತಿಯ ಕಾರಣ ನಾನು ತೊಡೆ ಏರಿ ಪುಷ್ಪ ಮಾಲೆಯನ್ನು ಹಾಕಿದ್ದೇನೆ.

ಸಮಿತಿ ಸದಸ್ಯರ ಅನುಮತಿ ಪಡೆದು ನಾನು ಶ್ರೀರಾಮಚಂದ್ರನ ತೊಡೆ ಏರಿ ಹೂ ಮಾಲೆ ಹಾಕಿ ಆರತಿ ಬೆಳಗಿದ್ದೇನೆ. ಕೆಳಗಿಳಿದ ನಂತರ ನಾನು ಶ್ರೀರಾಮಚಂದ್ರ ಮೂರ್ತಿಯ ತೊಡೆಗೆ ಹಣೆ ಹಚ್ಚಿ ನಮಸ್ಕರಿಸಿದ್ದೇನೆ. ಆದರೆ ಇದನ್ನು ಯಾರು ತೋರಿಸಿಲ್ಲ ಕೆಲವು ಹಿತಶತ್ರುಗಳು ಹಾಗೂ ನನಗೆ ಆಗದವರು ಈ ರೀತಿ ವಿವಾದವನ್ನ ಹುಟ್ಟುಹಾಕಿದ್ದಾರೆ.

ಒಂದು ವೇಳೆ ಇದು ತಪ್ಪು ಎನ್ನಿಸಿದರೆ ನಾನು ಶ್ರೀರಾಮ ಚಂದ್ರನಿಗೆ ಹಾಗೂ ಶ್ರೀರಾಮನ ಭಕ್ತರಿಗೆ ಕ್ಷಮೆಯನ್ನ ಕೋರುತ್ತೇನೆ ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಳಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net