ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಗೌರಿಕಾಲುವೆಯಿಂದ ಚಾಲನೆ

3 ckm 5
ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಚಾಲನೆ ನೀಡಿದರು. ಕೆ.ಎಸ್.ಪುಷ್ಪರಾಜ್, ಮಂಜುನಾಥ್, ಶಿಲ್ಪಾ ಅರುಣ್, ಕೌಶಿಕ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಷ್ಟç ನಾಯಕರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅದರಂತೆ ಜಿಲ್ಲೆಯಾದ್ಯಂತ ಪಕ್ಷ ಸಂಘಟಿಸುವ ದೃಷ್ಟಿಯಿಂದ ನಗರದಿಂದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಆರ್.ದೇವರಾಜ್‌ಶೆಟ್ಟಿ ತಿಳಿಸಿದರು.

ನಗರದ ಗೌರಿಕಾಲುವೆಯ ವಾರ್ಡ್ ನಂ. ೩೨ರ ನೀರಿನ ಟ್ಯಾಂಕ್ ಸಮೀಪ ನಗರ ಮಂಡಲದಿAದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿ, ಗೃಹಮಂತ್ರಿ ಹಾಗೂ ಬಿಜೆಪಿ ರಾಷ್ಟಿçÃಯ ಅಧ್ಯಕ್ಷರು ದೆಹಲಿಯಲ್ಲಿ ನಿನ್ನೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸುಮಾರು ೧೮ ಕೋಟಿ ಸದಸ್ಯತ್ವ ನೋಂದಣಿಗೆ ಗುರಿ ಹೊಂದಿದ್ದು ಈ ಅಭಿಯಾನ ದೇಶದಲ್ಲಿ ಯಶಸ್ಸು ಕಾಣಲಿ ಎಂದು ೮೮೦೦೦೦೨೦೨೪ ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂ ಲಕ ಅಭಿಯಾನಕ್ಕೆ ಪ್ರಧಾನ ಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದರು.
ಇದೀಗ ರಾಷ್ಟç ಹಾಗೂ ರಾಜ್ಯ ನಾಯಕರುಗಳ ಆದೇಶದನ್ವಯ ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಮುಂದಾಗಿದ್ದು, ಅಭಿಯಾನದ ಗುರಿ ಮುಟ್ಟುವ ಸಲುವಾಗಿ ಜಿಲ್ಲಾ ಬಿಜೆಪಿ ಮುಖಂಡರುಗಳು, ಕಾರ್ಯ ಕರ್ತರು ಹಾಗೂ ಪದಾಧಿಕಾರಿಗಳು ಅತಿಹೆಚ್ಚು ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕು. ಇಂದು ಗೌರಿ ಕಾಲುವೆಯಿಂದ ಅಭಿಯಾನ ಆರಂಭಿಸಲಾಗಿದೆ ಎಂದರು.
ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬೂತ್‌ನಂ.೨೦೧ರ ಗೌರಿಕಾಲುವೆಯಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಬೂತ್‌ನಿಂದ ೩೦೦ ಸದಸ್ಯರ ನೋಂದಣಿ ಸೇರಿದಂತೆ ಒಟ್ಟಾರೆ ನಗರ ಮಂಡಲದಿAದ ೪೦ ಸಾವಿರ ಸದಸ್ಯತ್ವ ನೋಂದಣಿಯ ಗುರಿ ಸಾಧಿಸಲು ಕ್ರಮ ಕೈಗೊಂಡಿz್ದೆÃವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಮಂಜುನಾಥ್, ನಗರ ಉಪಾಧ್ಯಕ್ಷ ಶಿಲ್ಪಾ ಅರುಣ್, ಸದಸ್ಯತ್ವ ಅಭಿಯಾನದ ಸಂಚಾಲಕ ಕೌಶಿಕ್, ಸಹ ಸಂಚಾಲಕ ವೆಂಕಟೇಶ್, ಸತೀಶ್, ಕೋಟೆ ಪ್ರದೀಪ್, ಮುಖಂಡರಾದ ಕಾರ್ತಿಕ್, ರಾಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net