ಬಿಜೆಪಿ ಸದಸ್ಯತ್ವ ಅಭಿಯಾನ: ದೇಶದಲ್ಲೇ ಯಲಹಂಕಕ್ಕೆ ಪ್ರಥಮ ಸ್ಥಾನ

vishwa
Published on

ಬೆಂಗಳೂರು:ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲೆ ಯಲಹಂಕ ಕ್ಷೇತ್ರ ಪ್ರಥಮ ಸ್ಥಾನ ಲಭಿಸಿದೆ ಎಂದು ಶಾಸಕ ಎಸ್​.ಆರ್​.ವಿಶ್ವನಾಥ್​ ಹೇಳಿದ್ದಾರೆ.

ಯಲಹಂಕ ಕ್ಷೇತ್ರದ ಮೈಲಪ್ಪನಹಳ್ಳಿಯ ಕೇಸರಿವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೃಹತ್​ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ, ಮುಖಂಡರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

"ಬಿಜೆಪಿ ಎಂಬುದು ಒಂದು ಪಕ್ಷ ಮಾತ್ರವಲ್ಲ. ಅದು ನಮ್ಮ ಕಾರ್ಯಕರ್ತರಲ್ಲಿ ರಕ್ತಗತವಾಗಿರುವ ಸಿದ್ಧಾಂತವಾಗಿದೆ. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಯಲಹಂಕ ರಾಜ್ಯ ಮತ್ತು ದೇಶದಲ್ಲೆ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮೂಲಕ ದಾಖಲೆ ಸೃಷ್ಟಿಸಿದೆ. ಪದಿಂದ ಸದಸ್ಯತ್ವ ಅಭಿಯಾನ ಆರಂಭವಾದ ಹಿನ್ನೆಲೆಯಲ್ಲಿ ಈವರೆಗೆ 1 ಲಕ್ಷದ 78 ಸಾವಿರ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಯಲಹಂಕ ಗ್ರಾಮಾಂತರ, ನಗರ ಮಂಡಲಗಳಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಯಲಹಂಕ ನಗರ ಮಂಡಲ ಅಧ್ಯರಾಗಿ ಎಂ.ಸತೀಶ್​ 2ನೇ ಬಾರಿಗೆ ಪುನರಾಯ್ಕೆ ಆದರು. ಉಳಿದಂತೆ ಪ್ರಧಾನ ಕಾರ್ಯದರ್ಶಿರಾಗಿ ಪವನ್​ಕುಮಾರ್​ ಮತ್ತು ಈಶ್ವರ್​ ಆಯ್ಕೆಯಾದರು. ಯಲಹಂಕ ಗ್ರಾಮಾಂತರ ಮಂಡಲ ಅಧ್ಯರಾಗಿ ದಾಸನಪುರ ಹೋಬಳಿಯ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಅದ್ದೆ ವಿಶ್ವನಾಥಪುರ ಮಂಜುನಾಥ್​, ಸೋಮು ಆಯ್ಕೆಯಾದರು.ಬಿಜೆಪಿ ಬೆಂ.ಉತ್ತರ ಜಿಲ್ಲಾಧ್ಯ ಎಸ್​.ಹರೀಶ್​, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್​.ಎನ್​.ರಾಜಣ್ಣ, ಎಚ್​.ಬಿ.ಹನುಮಯ್ಯ, ಚೊಕ್ಕನಹಳ್ಳಿ ವೆಂಕಟೇಶ್​, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್​ ಕಡತನಮಲೆ, ಜಿಲ್ಲಾ ರೈತ ಮೋರ್ಚಾ ಅಧ್ಯ ಜಿ.ಜೆ. ಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net