ಸಂಘಟನೆಗೆ ಕಾರ್ಯಕರ್ತರು ಕೈಜೋಡಿಸಿ

28 HBD 1
ಹುಮನಾಬಾದನಲ್ಲಿ ಬುಧವಾರ ಬಿಜೆಪಿ ಹುಮನಾಬಾದ್ ಮಂಡಲದ ಕಾರ್ಯಕಾರಿಣಿ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಸಭೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಕಲ್ಲೂರ, ಪಕ್ಷದ ಮುಖಂಡರಾದ ಶಿವಾನಂದ ಮಂಠಾಳಕರï, ಅರಹಂತ ಸಾವಳೇ, ವಿಶ್ವನಾಥ ಪಾಟೀಲ್, ಮಾಧವರಾವ ಹೊಸೂರೆ, ಮಲ್ಲಿಕಾರ್ಜುನ ಪಾಟೀಲ್​, ವೆಂಕಟ ಕಾಳೆ, ಅನಿಲ ಪಸರ್ಗಿ ಮತ್ತಿತರರು ಇದ್ದರು.
Published on

ಹುಮನಾಬಾದ್: ಬರುವ ಜಿಪಂ, ತಾಪಂ ಸೇರಿ ಇತರೆ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಸಂಘಟನೆಗೆ ಕಾರ್ಯಕರ್ತರು ಕೈಜೋಡಿಸಿ ಬಲಿಷ್ಠಗೊಳಿಸಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ ನೀಡಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ಮಂಡಲದ ಕಾರ್ಯಕಾರಿಣಿ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಾಗಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಶ್ರಮಿಸಿದ ಅರ್ಹ ಕಾರ್ಯಕರ್ತರನ್ನು ಪಕ್ಷ ಗುರುತಿಸಿ ಟಿಕೆಟ್​ ನೀಡಲಿದೆ ಎಂದರು.

ಸ್ಥಾನ ಒಂದೇ ಇರುತ್ತದೆ. ಆದರೆ ನಾಲ್ಕೈದು ಕಾರ್ಯಕರ್ತರು ಆಕಾಂಕ್ಷಿಗಳಾಗಿರುತ್ತಾರೆ. ಹೀಗಾಗಿ ಆಯ್ಕೆಯಲ್ಲಿ ಕೆಲವರಿಗೆ ಅಸಮಾಧಾನ ಆಗಿರಬಹುದು. ಇದನ್ನು ಪಕ್ಷದ ನಾಯಕರು ಅಂತಹ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಪಡಿಸಲಿದ್ದಾರೆ. ನಾನು ಶಾಸಕನಾಗಿ ಕೇವಲ ಒಂದುವರೆ ವರ್ಷವಾಗಿದ್ದು, ಕಾರ್ಯಕರ್ತರೆಲ್ಲರಿಗೂ ಸಾಕಷ್ಟು ತಮ್ಮ ಕೆಲಸ ಕಾರ್ಯದ ಬಗ್ಗೆ ಅಪೇಕ್ಷೆ ಇರುತ್ತವೆ. ಹಂತ ಹಂತವಾಗಿ ಈಡೇರಿಸಲಾಗುವುದು ಹೇಳಿದರು.

ನೂತನವಾಗಿ ಆಯ್ಕೆಯಾದ ಮಂಡಲದ ವಿವಿಧ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಜಿಲ್ಲಾ ಉಪಾಧ್ಯಕ್ಷ ಅರಹಂತ ಸಾವಳೆ ಮಾತನಾಡಿ, ಬಿಜೆಪಿ ಮಾತ್ರ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ವಿಫಲತೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸಲು ಶ್ರಮಿಸಬೇಕೆಂದು ತಿಳಿಸಿದರು.

ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವರಾವ ಹೊಸೂರೆ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬೆಳಕೇರಾ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಪಾಟೀಲ್, ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿ ವೆಂಕಟ ಕಾಳೆ, ಮಂಡಲದ ಅಧ್ಯಕ್ಷ ಅನಿಲ ಪಸರ್ಗಿ, ಮಾಜಿ ಅಧ್ಯಕ್ಷ ಪ್ರಭಾಕರ ನಾಗರಾಳೆ ಸೇರಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು , ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net